ಮಂಜೇಶ್ವರ: ಕರ್ನಾಟಕ ರಾಜ್ಯದಲ್ಲಿ 974 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ ಎಂಬ ವಾರ್ತೆ ತಿಳಿದು ಸಖೇದಾಶ್ಚರ್ಯವಾಯಿತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ತವರು ಜಿಲ್ಲೆ ಶಿವಮೊಗ್ಗದಲ್ಲಿ 313 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ ಎಂಬುದು ಎಷ್ಟೊಂದು ನಾಚಿಗೇಡಿನ ವಿಷಯ. ಸಾಕಷ್ಟು ಜಮೀನು ಖಾಲಿ ಇರುವ ಒಂದು ರಾಜ್ಯದಲ್ಲಿ ಈ ದುರ್ಗತಿ ಇದೆ ಎಂದಾದರೆ ಇವರು ಜನತೆಗಾಗಿ ಏನನ್ನು ಮಾಡುತಿದ್ದಾರೆ ಎಂಬುದು ತಿಳಿಯದಂತಹ ಸ್ಥಿತಿ ಆಗಿದೆ. ಕರ್ನಾಟಕ ಹೈಕೋರ್ಟ್ ಜಮೀನು ಒದಗಿಸಿ ಸ್ಮಶಾನ ನಿರ್ಮಿಸಲು ಆದೇಶ ನೀಡಿದರೂ ಅಲ್ಲಿನ ಸರಕಾರ ಇದನ್ನು ಪಾಲಿಸಲು ತಯಾರಾಗಿಲ್ಲ. ಕರ್ನಾಟಕವನ್ನು ಇದುವರೆಗೂ ಆಳಿದ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ಶುಚಿತ್ವದ ಕಾರ್ಯದಲ್ಲಿ ಸ್ವಾತಂತ್ರ್ಯ ಲಭಿಸಿದ ಏಳು ದಶಕ ಕಳೆದರೂ ಈ ಪ್ರಾರ್ಥಮಿಕ ಅವಶ್ಯಕತೆ ನೆರವೇರಿಸಲು ತಯಾರಾಗಿಲ್ಲ. ಕೇರಳದಲ್ಲಿರುವ ಸ್ಮಶಾನಗಳ ಬಗ್ಗೆ ಕರ್ನಾಟಕದ ಅಧಿಕೃತರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಕರ್ನಾಟಕದ ಮುಖ್ಯಮಂತ್ರಿ ಹಾಗೂ ಅವರ ಪ್ರತಿನಿಧಿ ಇದಕ್ಕಾಗಿ ಕೇರಳ ಸಂದರ್ಶಸುವುದು ಒಳಿತು. ಇಲ್ಲಿ ಉದ್ಯಾವರ ಮಾಡ, ಕೋಡಿಬೈಲ್ ಮತ್ತು ಬಾಕುಡ ಸಮುದಾಯದ ಸ್ಮಶಾನಗಳ ಬಗ್ಗೆ ವಿವಾದವಿದ್ದರೂ ಜಮೀನು ಇಲ್ಲವಾಗಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜನಕೀಯ ಯೋಜನೆ ಪ್ರಕಾರ ಉಂಟಾದ ಅಧಿಕಾರ ವಿಕೇಂದ್ರಕರಣದ ಮೂಲಕ ಸ್ಮಶಾನಗಳ ನಿರ್ವಹಣೆಯನ್ನು ಕೇರಳ ಸರಕಾರ ಗ್ರಾಮ ಪಂಚಾಯತ್ ಗಳಿಗೆ ನೀಡಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರ ಈ ಬಗ್ಗೆ ಮೌನದಿಂದಿರುವುದು ಸಮಾಜದ ಬಗ್ಗೆ ಇವರಿಗಿರುವ ಕಾಳಜಿಯನ್ನು ತೋರಿಸುತ್ತದೆ." ಮೇಕ್ -ಇನ್ - ಇಂಡಿಯ ಎಂಬ ಘೋಷಣೆಯ ಮೂಲಕ ಕೋರ್ಪರೇಟರುಗಳಿಗಾಗಿ ಸಾಕಷ್ಟು ಜಮೀನನ್ನು ನೀಡಲು ಕೇಂದ್ರ ಹಾಗೂ ಕರ್ನಾಟಕ ಸರಕಾರ ಮುಂದಾಗುತ್ತಿದ್ದು ಸ್ಮಶಾನಕ್ಕೆ ಜಮೀನು ನೀಡದಿರುವುದು ಜನತೆಗೆ ಮಾಡುವ ಅಪಮಾನವಾಗಿದೆಯೆಂದು ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಸಂಚಾಲಕ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸ್ಮಶಾನಗಳ ಬಗ್ಗೆ ತಿಳಿದು ಕೊಳ್ಳಲು ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವ ಕೋಟಾ ಕೇರಳ ಸಂದರ್ಶಿಸಲಿ: ಬಿ.ವಿ ರಾಜನ್
July 20, 2022
0
Tags
