ಕಾಸರಗೋಡು: ಆಲ್ ಕೇರಳ ಪೊಟೊಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಸಮ್ಮೇಳನವು ವಲಯ ಕಚೇರಿಯಲ್ಲಿ ಜರಗಿತು. ಯುನಿಟ್ ಅಧ್ಯಕ್ಷ ಶ್ರೀಕಾಂತ್ ಕಾಸರಗೋಡು ದ್ವಜಾರೋಹಣಗೈದರು. ವಲಯ ಉಪಾಧ್ಯಕ್ಷ ಮೈಂದಪ್ಪ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತರ ನಡೆದ ಸಮಾರಂಭದಲ್ಲಿ ಛಾಯಾ ಚಿತ್ರರಂಗದಲ್ಲಿ ಪ್ರಶಸ್ತಿ ಗಳಿಸಿದ ಮಣಿ ಐ ಫೋಕಸ್, ದಿನೇಶ್ ಇನ್ಸೈಟ್, ಯುನಿಟ್ ನಿತೀಕ್ಷಕರಾದ ದಿವಾಕರ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸುನಿಲ್ ಪಿ.ಟಿ, ಅಭಿಲಾಷ್, ಯುನಿಟ್ ಕಾರ್ಯದರ್ಶಿ ಮನೋಜ್ ಎಂಬಿವರು ವರದಿ ವಾಚಿಸಿದರು. ಜಿಲ್ಲಾ ಕಾರ್ಯದರ್ಶಿ ವಾಸು ಎ, ಜತೆ ಕಾರ್ಯದರ್ಶಿ ಚಂದ್ರಶೇಖರ, ವಲಯ ಕೋಶಾಧಿಕಾರಿ ರತೀಶ್ ಮೊದಲಾದವರು ಶುಭ ಹಾರೈಸಿದರು.
ನೂತನ ಸಾಲಿನ ಪದಾಧಿಕಾರಿಗಳಾಗಿ ರತೀಶ್ ಎ(ಅಧ್ಯಕ್ಷ), ವಿನೋದ್ (ಉಪಾಧ್ಯಕ್ಷ), ವಸಂತ್ ಕೆರೆಮನೆ (ಕಾರ್ಯದರ್ಶಿ), ವಿಶಾಕ್ (ಜತೆ ಕಾರ್ಯದರ್ಶಿ),ಅಮಿತ್ ಅಂಚನ್ ( ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು.



