ಮಂಜೇಶ್ವರ : ಬೀಟಾ ಪ್ರೊಡಕ್ಷನ್ ಬ್ಯಾನರಿನಲ್ಲಿ ತಯಾರಾಗುವ "ಸಿಲಿಕಾನ್ ಸಿಟಿ" ಕನ್ನಡ ಕಿರುಚಿತ್ರದ ಪೂಜಾ ಮುಹೂರ್ತ ಕಾರ್ಯಕ್ರಮವು ಇತ್ತೀಚೆಗೆ ಬಾಯಾರು ಪೆರುವೊಡಿ ಸರವು ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಶ್ರೀ ನಾರಾಯಣ ಬಾಯಾರು ಇವರ ಉಪಸ್ಥಿತಿಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಈ ಕಿರುಚಿತ್ರದ ನಿರ್ದೇಶಕರಾದ ತುಕಾರಾಮ ಬಾಯಾರು, ನಾಯಕ ನಟರಾದ ಶರತ್ ಚಂದ್ರ ಬಾಯಾರು, ನಾಯಕಿ ಗೌತಮಿ ಹಾಗೂ ಗಿರೀಶ್ ಸಾಲ್ಯಾನ್ ಮುಳಿಯ, ಪ್ರವೀಣ್ ಆಚಾರ್ಯ ಪುತ್ತೂರು, ಬಾಲಪ್ರತಿಭೆ ಚುಕ್ಕಿ ವಿಟ್ಲ, ಸಂಧ್ಯಾ ಮಂಗಿಲಪದವು, ಮಂಗಳಗೌರಿ ಭಟ್ ಸರವು, ಆಶಾಚಂದ್ರ ಸರವು, ಪ್ರವೀಣ್ ಜಯ ವಿಟ್ಲ, ಕೃಷ್ಣ ಆಚಾರ್ಯ ಬಳ್ಳೂರು, ಧರ್ಮೇಂದ್ರ ಆಚಾರ್ಯ ಬಳ್ಳೂರು, ಶೈಲೇಶ್ ಆಚಾರ್ಯ ಪುತ್ತಿಗೆ, ಕಿರಣ್ ಆಚಾರ್ಯ ಪುತ್ತಿಗೆ ಭಾಗವಹಿಸಿದರು.
ಗಿರೀಶ್ ಸಾಲ್ಯಾನ್ ಮುಳಿಯ ಕಾರ್ಯಕ್ರಮ ಸಂಯೋಜಿಸಿ, ಕಿರಣ್ ಆಚಾರ್ಯ ಪುತ್ತಿಗೆ ನಿರೂಪಿಸಿದರು.
