ಮಂಗಳೂರು: ಈಜಲು ಹೋಗಿದ್ದ ಆರು ಮಂದಿ ಯುವಕರ ಪೈಕಿ ಇಬ್ಬರು ನೀರುಪಾಲಾಗಿದ್ದು ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ನಗರದ ಅಳಪೆ ಸ್ಥಳೀಯ ನಿವಾಸಿಗಳಾದ ವೀಕ್ಷಿತ್ (26) ಮತ್ತು ವರುಣ್ (26) ನೀರುಪಾಲಾದವರು.
ಈ ಘಟನೆ ಆದಿತ್ಯವಾರ ಸಂಜೆ ಅಳಪೆ ಪಡ್ಡು ಬಳಿ ನಡೆದಿದೆ.
ಅಳಪೆಯ ಪಡು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ವರುಣ್, ವೀಕ್ಷಿತ್ ಸೇರಿದಂತೆ 6 ಮಂದಿ ಯುವಕರು ಈಜಲು ತೆರಳಿದ್ದರು. ಇವರೆಲ್ಲ ನೀರಿಗಿಳಿದಿದ್ದು, ಈ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರು ನೀರುಪಾಲಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿತ್ತು, ಬಳಿಕ ಮೃತದೇಹಗಳನ್ನು ಮೇಲೆತ್ತಲಾಗಿದ್ದು, ಶವಾಗಾರಕ್ಕೆ ರವಾನಿಸಲಾಗಿದೆ.
ಮೃತರ ಪೈಕಿ ವೀಕ್ಷಿತ್ ದುಬೈನಲ್ಲಿ ಉದ್ಯೋಗದಲ್ಲಿದ್ದ ಬಳಿಕ ಊರಿಗೆ ಮರಳಿದ್ದು, ಮೀನು ವ್ಯಾಪಾರ ನಡೆಸುತ್ತಿದ್ದರೆ ಮತ್ತೊಬ್ಬ ಯುವಕ ವರುಣ್ ಡಿಜೆ ಆಗಿ, ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡಿಕೊಂಡು ಅವರ ಕುಟುಂಬಗಳಿಗೆ ಆಧಾರವಾಗಿದ್ದರು. ಸದ್ಯ ಇಬ್ಬರ ದುರಂತ ಸಾವು ಎರಡೂ ಮನೆಯಲ್ಲಿ ಶೋಕಕ್ಕೆ ಕಾರಣವಾಗಿದೆ.