ಬಂಟ್ವಾಳ : ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ.ಈ ಪ್ರಯುಕ್ತ ಅದೆಷ್ಟೋ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಬಡ ಕುಟುಂಬಕ್ಕೆ ಆಸರೆಯಾಗಿರುವ ಬೇಂಕ್ಯದ ರಿಕ್ಷಾ ಚಾಲಕರು ಮತ್ತು ಮಾಲಕರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿರುವ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನ ಹಾಗು ಸಿಹಿ ತಿಂಡಿಯನ್ನು ವಿತರಿಸಲಾಯಿತು. ಇನ್ನು ಸದಾ ಬಡಕುಟುಂಬಕ್ಕೆ ಆಸರೆಯಾಗುತ್ತಿರುವ ರಿಕ್ಷಾ ಚಾಲಕರು ಹಾಗೂ ಮಾಲಕರು ಅಬ್ಬಾಸ್ ಮುನ್ನೂರು ಇವರ ತುರ್ತು ಚಿಕಿತ್ಸೆಗೆ 11,422 ಮತ್ತು ಗುರುಮಂದಿರ ನಿವಾಸಿ ಭಾರತಿರವರ ಚಿಕಿತ್ಸೆಗೆ 11,555 ಮತ್ತು ಸಜೀಪ ಮುನ್ನೂರಿನ ಮರಿಯಮ್ಮ ಕುಟುಂಬಕ್ಕೆ 12,551 ಹಾಗೂ ಅಬ್ದುಲ್ ಅಭೀಝ್ ಕುಟುಂಬಕ್ಕೆ 14,810 ಒಟ್ಟು 50,338 ರೂಪಾಯಿಗಳನ್ನು ಒಟ್ಟು ಸೇರಿಸಿ ಬಡ ಕುಟುಂಬಕ್ಕೆ ನೀಡಿದ್ದಾರೆ.
ರಿಕ್ಷಾ ಚಾಲಕರ ಈ ಸಮಾಜಮುಖಿ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ನಮಗೊಂದು ರಿಕ್ಷಾ ತಂಗುದಾಣ ನಿರ್ಮಿಸಿಕೊಡಬೇಕೆಂದು ರಿಕ್ಷಾ ಚಾಲಕರ ಮತ್ತು ಮಾಲಕರ ಬೇಡಿಕೆಯಾಗಿದ್ದು ಸ್ಥಳೀಯ ಶಾಸಕರು ಈ ಬೇಡಿಕೆಯನ್ನ ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.