ಜಯಕಿರಣ ಪತ್ರಿಕೆಯ ಕಾಸರಗೋಡು ಜಿಲ್ಲಾ ವರದಿಗಾರ, ಯುವ ಸಂಘಟಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮುಂದಾಳು ಮಂಜೇಶ್ವರದ ರತನ್ ಕುಮಾರ್ ಹೊಸಂಗಡಿ ಎಂಬವರೇ ಈ ರೀತಿ ಸಿಕ್ಕಿದ ಮೊಬೈಲನ್ನು ಸಕಾಲದಲ್ಲಿ ವಾರೀಸುದಾರರಿಗೆ ಹಿಂತಿರುಗಿಸಿದ ಪ್ರಾಮಾಣಿಕ. ರವಿವಾರ (15-06-2025) ಸಂಜೆ ಪುತ್ತೂರಿನಿಂದ ಉಪ್ಪಳಕ್ಕೆ ಬರುವ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ರತನ್ ಕುಮಾರ್ ಅವರು ತಮ್ಮ ತಾಯಿಯೊಂದಿಗೆ ಸಂಜೆಯ ಬಸ್ಸಿಗೆ ಮಂಜೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಉಪ್ಪಳ ಸಮೀಪದ ಕೈಕಂಬಕ್ಕೆ ತಲುಪಿದ ಬಳಿಕ ಎದುರಿನ ಸೀಟಿನಲ್ಲಿದ್ದ ಮೊಬೈಲ್ ಗೋಚರಿಸಿದೆ. ಬಳಿಕ ಸ್ವಲ್ಪದರಲ್ಲೆ ಆ ಮೊಬೈಲಿಗೆ ಕರೆ ಬಂದಿದ್ದು ಕಳೆದು ಕೊಂಡವರು ಬೇರೆಯವರ ಮೊಬೈಲಿನಿಂದ ಕರೆ ಮಾಡಿದ್ದರು. ಈ ವೇಳೆ ರತನ್ ಕುಮಾರ್ ತಮ್ಮ ಮನೆ ವಿಳಾಸ ತಿಳಿಸಿದ್ದು ಉಮೇಶ್ ರೈ ಅವರು ಸ್ವತಃ ಆಗಮಿಸಿ ಮೊಬೈಲ್ ಪಡೆದುಕೊಂಡು ಪ್ರಾಮಾಣಿಕತನವನ್ನು ಮೆಚ್ಚಿ ಪ್ರಶಂಸಿದರು. ಮೊಬೈಲ್ ಸುಮಾರು 30 ಸಾವಿರ ಬೆಲೆಬಾಳುವಂತದ್ದೆಂದು ಉಮೇಶ್ ರೈಯವರು ತಿಳಿಸಿದ್ದಾರೆ.
ಬಿದ್ದು ಸಿಕ್ಕಿದ ಬೆಲೆ ಬಾಳುವ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪತ್ರಕರ್ತ
June 16, 2025
0

