ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ 18 ವರ್ಷಗಳ ಕಾಯುವಿಕೆ. ಸೋಲು, ಹೀನಾಯ ಸೋಲು, ಟ್ರೋಲ್ಸ ಮುಖಭಂಗ ಎಲ್ಲದರ ನಡುವೆ ನಿರಂತರವಾಗಿ ಆರ್ಸಿಬಿಗೆ ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಪ್ರತಿ ಸಲ ಕಪ್ ನಮ್ದೆ ಎಂದು ಕಾಯುತ್ತಾ ಕುಳಿತಿದ್ದ ಕಾಲ ಹೋಯಿತು. ಇದೀಗ ಕಪ್ ನಮ್ಮದೇ. ಅಹಮ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ದ 6 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.
ಇಡೀ ತಂಡ ಭಾವುಕ
ಆರ್ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ಇತ್ತ ಸಂಭ್ರಮ ಮುಗಿಲು ಮುಟ್ಟಿದೆ. ಇಡೀ ತಂಡ ಭಾವುಕಗೊಂಡಿದೆ.

