ವೇಣೂರು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ | ಗ್ರಾಹಕ ಸಂಪರ್ಕ ಕಾರ್ಯಕ್ರಮ
September 24, 2025
0
ವೇಣೂರು : ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ | ಗ್ರಾಹಕ ಸಂಪರ್ಕ ಯಶಸ್ವಿ 7 ವರ್ಷ ಪೂರೈಸಿ 8 ನೇ ವರ್ಷಕ್ಕೆ ಪಾದರ್ಪಣೆಗೈಯ್ಯುತ್ತಿರುವ ಈ ಶುಭಸಂದರ್ಭದಲ್ಲಿ ನಡೆದ *ಗ್ರಾಹಕ ಸಂಪರ್ಕ* ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಸಂಘದ ಉಪಾಧ್ಯಕ್ಷರಾದ ಶ್ರೀ ಜಗದೀಶ್ಚಂದ್ರ ಡಿ.ಕೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಧರಣೇಂದ್ರ ಕುಮಾರ್, ಚಂದ್ರಶೇಖರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಪೊಕ್ಕಿ. ವೇಣೂರು ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ನಿತೀಶ್ ಎಚ್, ಕೇಂದ್ರ ಕಚೇರಿಯ ಮುಖ್ಯ ಲೆಕ್ಕಿಗ ಶ್ರೀ ಕೀರ್ತನ್ ಕುಮಾರ್, ಶಿರ್ತಾಡಿ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ಪ್ರಕಾಶ್ ಬಿ. ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕರಾದ ಶ್ರೀ ಉಮೇಶ್ ಇವರು ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಶ್ವತ್ಥ್ ಕುಮಾರ್ ಪ್ರಸ್ತಾವಿಸಿದರು. ಸಿಬ್ಬಂದಿಯಾದ ಶ್ರೀ ಪ್ರಸನ್ನ ಇವರು ವಂದಿಸಿ ಯಶಸ್ವಿಯಾಗಿ ಸಂಪನ್ನಗೊಂಡಿತು.
