ಬಂಟ್ವಾಳ : ಸಜೀಪ ಶ್ರೀ ಬಾಲಗಣಪತಿ ಅನ್ನಪ್ಪಾಡಿ ದೇವಸ್ಥಾನದಲ್ಲಿ ಡಿ.28ರಂದು ಶ್ರೀ ಮೂಲಮಂತ್ರ ಲಕ್ಷ ಜಪ ಯಜ್ಞ-ದೂರ್ವ ಹೋಮ, ಚತುರ್ಥ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆ ಭಾನುವಾರ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು.ಡಿ. 28ರಂದು ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ-ದೂರ್ವ ಹೋಮ ಹಾಗೂ ಚತುರ್ಥ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಉತ್ಸವವು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಸಜೀಪ ಮಾಗಣೆ ತಂತ್ರಿಗಳಾದ ಎಮ್ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಎಮ್ ಸುಬ್ರಹ್ಮಣ್ಯ ಭಟ್ “ಇದು ಒಂದು ಪುಣ್ಯದ ಕಾರ್ಯಕ್ರಮ ಇತಿಹಾಸವುಳ್ಳ ಈ ಕ್ಷೇತ್ರದಲ್ಲಿ ಈ ಮಹಾ ಜಪ ಯಜ್ಞ ಕಾರ್ಯಕ್ರಮ ಯಶ್ವಸಿಯಾಗಿ ನಡೆಯಲಿ ಇಡೀ ಊರಿಗೆ ಶುಭವಾಗಲಿ” ಎಂದು ಶುಭಹಾರೈಸಿದರು.ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ-ದೂರ್ವ ಹೋಮ ಲಾಂಭನವನ್ನು ಮಮತ ಶೆಟ್ಟಿ ಬಿಡುಗಡೆಗೊಳಿಸಿದರು.






