ಉಡುಪಿ, ಪಡುಕುತ್ಯಾರು: ಜೀವನದಲ್ಲಿ ಕೇವಲ ನಾವು ಸಂತಸದಿಂದ ಇದ್ದರೆ ಸಾಲದು ಇನ್ನೊಬ್ಬರನ್ನು ಸಂತಸದಿಂದ ಇರಿಸುವ ಕಾಯಕ ಮಾಡಬೇಕು, ಇತರರಿಗಾಗಿ ಬಾಳುವುದು ಧರ್ಮ, ತನಗಾಗಿ ಬಾಳುವುದು ಕರ್ಮ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ವೇಳೆ ಇಂದು ನಡೆದ ತಮ್ಮ ಜನ್ಮವರ್ಧಂತಿಯ ಧರ್ಮಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ನಗು ಮತ್ತು ಮೌನ ಮುಖಕ್ಕೆ ಆಭರಣಗಳಾದರೂ, ಮುಗಳು ನಗುವಿಗೆ ಪ್ರಧಾನ್ಯ ಜಾಸ್ತಿ. ಸೇವೆ ಮಾಡಲು ದೊಡ್ಡ ನದಿಯಾಗದೆ ಇದ್ದರೂ ಪುಟ್ಟ ಹನಿಯಾಗುವ ಮೂಲಕ ಸಮಾಝ ಸೇವೆಯನ್ನು ಮಾಡಬಹುದು. ಚಪ್ಪಾಳೆ ತಟ್ಟುವ ಹತ್ತಾರು ಕೈಗಳಿಗಿಂತ ಕಣ್ಣೀರು ಒರೆಸುವ ಒಂದು ಬೆರಳು ಅತೀ ಮುಖ್ಯ, ಸಮಾಜ ಸೇವೆಯ ಮೂಲಕ ಕಣ್ಣೀರು ಒರೆಸುವ ಕಾಯಕದಲ್ಲಿ ತೊಡಗಿಸಿದರೆ ಭಗವಂತ ಒಲಿಯುವುದು ಸುನಿಶ್ಚಿತ ಎಂದು ನುಡಿದ ಅವರು ಸತ್ತ ಮೇಲೆ ಸ್ವರ್ಗ ಕಾಣುವುದಿಕ್ಕಿಂತ ಜೀವನದಲ್ಲಿ ನಗುನಗುತ ಇತರರನ್ನು ನಗಿಸುವ ಕಾಯಕ ಮಾಡಿ ಸ್ವರ್ಗವನ್ನು ಕಾಣಿರಿ ಎಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ ವಹಿಸಿದ್ದರು. ಮುಕೈ ಅತಿಥಿಗಳಾಗಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀಪೀಠ ಪಂಚಸಿಂಹಾಸನ ಸಮಿತಿ ಆನೆಗುಂದಿ ಕೊಪ್ಪಳ ಮತ್ತು ಬೆಂಗಳೂರು ಶಾಖಾ ಮಠ ಸಮಿತಿ ಅಧ್ಯಕ್ಷರಾದ ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು ಭಾಗವಹಿಸಿದ್ದರು. ಧರ್ಮ ಸಭೆಯಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾ ಸಂಚಾಲಕ ಬಿ.ಸೂರ್ಯ ಕುಮಾರ್ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಸೆಟ್ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ , ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪೊಳ್ಯ ಉಮೇಶ್ ಆಚಾರ್ಯ ಪುತ್ತೂರು, ಪ್ರವೀಣ್ ಆಚಾರ್ಯ ರಂಗನಕೆರೆ, ಬೆಳುವಾಯಿ ಸುಂದರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಪುರೋಹಿತ್ ಶ್ರೀಧರ ಶರ್ಮಾ ಕಟಪಾಡಿ, ಪುರೋಹಿತ್ ಲಕ್ಷ್ಮೀಕಾಂತ ಶರ್ಮಾ ಬಾರ್ಕೂರು, ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ಶಿವಕುಮಾರ ಶರ್ಮಾ ಭಾಗವಹಿಸಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ನೇತೃತ್ವದಲ್ಲಿ ಪಾಠಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪದಕ ಸ್ಮರಣಿಕೆಯನ್ನು ಜಗದ್ಗುರುಗಳವರು ವಿತರಿಸಿದರು. ಪ್ರಶಾಂತ ಶರ್ಮಾ ಆಲೂರು ಹಾಗೂ ಪುರೋಹಿತ್ ಪ್ರಕಾಶ್ ಶರ್ಮಾ ಬಾರ್ಕೂರು ಸ್ಪರ್ಧೆಗಳನ್ನು ನಿರ್ವಹಿಸಿದ್ದರು.
ಜನ್ಮ ವರ್ಧಂತಿಯ ಅಂಗವಾಗಿ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹೋಮ, ಶ್ರೀ ಸರಸ್ವತೀ ಹೋಮ, ಧನ್ವಂತರೀ ಹೋಮ, ಮಹಾಮೃತ್ಯುಂಜಯ ಹೋಮ,ನವಗ್ರಹ ಹೋಮ ಮತ್ತು ರುದ್ರಯಾಗ ನಡೆಯಿತು.
ಆನೆಗುಂದಿ ಪ್ರತಿಷ್ಠಾನ, ವಡೇರಹೋಬಳಿ ಶ್ರೀಧರ ಆಚಾರ್ಯ, ಪುಷ್ಪಲತಾ ಲೋಕೇಶ್ಎಂ.ಬಿ ಆಚಾರ್ಕಂಬಾರ್, ಬಿ.ಸೂರ್ಯ ಕುಮಾರ್ಆಚಾರ್ಯ ಹಳೆಯಂಗಡಿ, ಶರತ್ಕೇಶವ ಆಚಾರ್ಯ ಮಂಗಳೂರು ಇವರಿಂದ ಜನ್ಮವರ್ಧಂತಿಯ ಅಂಗವಾಗಿ ನಡೆದ ತುಲಾಭಾರ ಸೇವೆಯುನಡೆಯಿತು. ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮಹಿಳಾಬಳಗದವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ತ್ರಾಸಿ ಸುಧಾಕರ ಆಚಾರ್ಯ , ಮಹಿಳಾಬಳಗ ಕಟಪಾಡಿ, ವಿಶ್ವೇ ಶ್ವರ ಪುರೋಹಿತ್ಬಾಳಿಲ ಸುಳ್ಯ , ಪಯ್ಯಾಲ್ ರಾಜೇಶ್ ಆಚಾರ್ಯ , ಶರತ್ಕೇಶವ ಆಚಾರ್ಯ ಮಂಗಳೂರು, ನಾಗರಾಜ ಆಚಾರ್ಯಾ ಪೆರ್ಡೂರು, ಶಿವರಾಮ ಆಚಾರ್ಯ ಶಿವಪುರ ಪೆರ್ಡೂರು, ಜಯರಾಮ ಆಚಾರ್ಯ ನಕ್ರೆ ಕಾರ್ಕಳ, ಶ್ರೇಯಾ ಸಾಯಿರಾಮ್ಪುತ್ತೂರು,ಚಂದ್ರಶೇಖರ ಶಾರದ ಆಚಾರ್ಯ ಪುತ್ತೂರು ಇವರು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ವಿಶ್ವಕರ್ಮ ನಾಗ ಬ್ರಹ್ಮ ಸ್ಥಾನ ಮಜೂರು ಕಾಪು ಇದರ ಪದಾಧಿಕಾರಿಗಳಾದ ಶ್ರೀನಾಥ ಆಚಾರ್ಯ ಕಾಪು, ಪ್ರದೀಪ ಆಚಾರ್ಯ ಮಜೂರು, ನವೀನ ಆಚಾರ್ಯ ನೇಜಾರು, ಭಾಸ್ಕ ಆಚಾರ್ಯ ಕುಳೂರು, ದಯಾನಂದ ಆಚಾರ್ಯ ಕೇಳಾರ್ಕಳ ಬೆಟ್ಟು, ಸದಾನಂದ ಆಚಾರ್ಯ ಕೇಳಾರ್ಕಳ ಬೆಟ್ಟು, ಶ್ರೀಕಾಂತ ಆಚಾರ್ಯ ಕಾಪು, ಶ್ರೀಧರ ಜೆ.ಆಚಾರ್ಯ ಕಟಪಾಡಿ ಹಾಗೂ ಸದಸ್ಯರು ಜಗದ್ಗುರುಗಳವರ ಜನ್ಮವರ್ಧಂತಿ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು, ಕೆ.ರಾಘವೇಂದ್ರ ಆಚಾರ್ಯ ಉಡುಪಿ, ಕನ್ಯಾನ ಜನಾರ್ಧನ ಆಚಾರ್ಯ, ಗಂಗಾಧರ ಆಚಾರ್ಯ ಕುತ್ಯಾರು, ದಿನೇಶ್ ಆಚಾರ್ಯ ಕಿನ್ನಿಗೋಳಿ ಯಜ್ಞೇಶ್ವರ ಆಚಾರ್ಯ ಕುತ್ಯಾರು, ಯೋಗೀಶ್ ಆಚಾರ್ಯ ಕರಂಬಳ್ಳಿ, ಗುರುರಾಜ ಆಚಾರ್ಯ ಮಂಗಳೂರು, ಗಣೇಶ ಆಚರ್ಯ ಕೆಮ್ಮಣ್ಣು, ವಸಂತ ಆಚಾರ್ಯ ಮಜೂರು ಮುತಾದವರು ಉಪಸ್ಥಿತರಿದ್ದರು. ಕಾಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಸ್ವಾಗತಿಸಿ ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಧನ್ಯವಾದವಿತ್ತರು. ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
