ವರದಿ : ರತನ್ ಕುಮಾರ್ ಹೊಸಂಗಡಿ
ಕೇರಳದಿಂದ ಕರ್ನಾಟಕ ರಾಜ್ಯ ಪ್ರವೇಶಿಸಲು ಆರ್ಟಿಪಿಸಿಆರ್ ಸರ್ಟಿಫಿಕೇಟ್ ಕಡ್ಡಾಯ ವಿರುದ್ಧ ಎಲ್.ಡಿ.ವೈ.ಎಫ್ ಪ್ರತಿಭಟನೆ
August 02, 2021
0
ಮಂಜೇಶ್ವರ:- ಕೇರಳದಿಂದ ಕರ್ನಾಟಕ ರಾಜ್ಯ ಪ್ರವೇಶಿಸಲು ಆರ್ಟಿಪಿಸಿಆರ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮನುಷ್ಯತ್ವ ರಹಿತ ನೀತಿಗೆ ಎದುರಾಗಿ, ಈಗಾಗಲೇ ವ್ಯಾಕ್ಸಿನ್ ಪಡೆದ ಎಲ್ಲಾರಿಗೂ ಗಡಿಯಲ್ಲಿ ತಡೆ ಮಾಡಬಾರದು ಎಂದು ಎಲ್.ಡಿ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ತಲಪಾಡಿಯಲ್ಲಿ ಇಂದು ಸಂಜೆ ಪ್ರತಿಭಟನೆ ಜರಗಿತು. ಎಲ್.ಡಿ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಭಾಗ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಾಕ್ಟರ್ ಖಾದರ್ ಉದ್ಘಾಟಿಸಿದರು. ಎನ್. ವೈ. ಎಲ್ ನೇತಾರ ತಾಜುದ್ದೀನ್ ಮೊಗ್ರಾಲ್, ಎ. ಐ. ವೈ. ಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ದಯಾಕರ ಮಾಡ ಮೊದಲಾದವರು ಮಾತನಾಡಿದರು. ಡಿ. ವೈ. ಎಫ್. ಐ ನೇತಾರ ನ್ಯಾಯವಾದಿ ಉದಯ ಕುಮಾರ್ ಗಟ್ಟಿ ಸ್ವಾಗತಿಸಿದರು.
Tags
