ಪಡುಕುತ್ಯಾರು: ಬದುಕನ್ನು ಭಗವಂತನ ವರಪ್ರಸಾದವೆಂದು ಸ್ವೀಕರಿಸಿ ಜೀವನ ನಡೆಸಿದರೆ ನಾವು ಪ್ರಸನ್ನತೆಯನ್ನು ಕಾಣಲು ಸಾಧ್ಯ. ಬದುಕನ್ನು ನೋಡುವ ದೃಷ್ಟಿ ಚೆನ್ನಾಗಿರಬೇಕು ಇನ್ನೊಬ್ಬರಿಗಾಗಿ ಅವರ ಮೆಚ್ಚುಗೆ ಗಳಿಸಲು ಬದುಕಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ವೇಳೆ ಕಾರ್ಕಳ ವಲಯದವರ ಗುರುಪಾದುಕಾ ಪೂಜೆಯಲ್ಲಿ ಆಶೀರ್ವಚನ ನೀಡುತ್ತಿದ್ದರು.
ಬಯಲಲ್ಲಿ ಇಟ್ಟ ದೀಪದಂತೆ, ನೀರ ಮೇಲಣ ಗುಳ್ಳೆಯಂತೆ ಇರುವ ಬದುಕನ್ನು ಸಂತೋಷದಿಂದ ಆಸ್ವಾದಿಸಲು ಕಲಿಯಬೇಕು. ಬದುಕಿನಲ್ಲಿ ಅಳಲು ನೂರು ಕಾರಣವಿದ್ದರೆ ಸಂತೋಷಪಡಲು ಸಾವಿರ ಕಾರಣವಿದೆ ಎನ್ನುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಬದುಕಿನಲ್ಲಿ ಇದು ನನ್ನದು ಎನ್ನುವ ಸ್ವಾರ್ಥ ಭಾವನೆ ಬಂದರೆ ಪದಾರ್ಥವಾಗಿ ನಮಗೆ ಪರಿತಾಪ ಉಂಟಾಗುತ್ತದೆ. ಅದೇ ಭಗವಂತನಿಗೆ ಎಂದಾದರೆ ಪದಾರ್ಥವು ಪ್ರಸಾದವಾಗುತ್ತದೆ. ಬದುಕಿನಲ್ಲಿ ಆಸೆ ಬೇಕು ಆದರೆ ಅದೇ ಆಸೆಯ ಬಂಧನಕ್ಕೆ ಒಳಗಾಗದೆ ಅತಿ ಆಸೆಗೆ ಒಳಪಡದೆ, ಸಾಕು ಮತ್ತು ಬೇಕು ಎಂಬುದರ ಸರಿಯಾದ ಪರಿವು ನಮಗಿರಬೇಕು ಎಂದು ಉದಾಹರಣೆಗಳೊಂದಿಗೆ ವಿವರಣೆ ನೀಡಿದ ಶ್ರೀಗಳವರು ಭಗವಂತನ ಅನುಗ್ರಹದಿಂದ ತನಗೆ ಪ್ರಾಪ್ತಿಯದುದರಲ್ಲಿ ತೃಪ್ತಿ ಕಾಣದೆ ಕೊಡದೆ ಇರುವುದರ ಬಗ್ಗೆ ಆಲೋಚಿಸಿ ಕಾಲಹರಣ ಮಾಡುತ್ತೇವೆ. ಆಲೋಚಿಸುತ್ತೇವೆ. ನಾನೇ ಮತ್ತು ನನ್ನಿಂದ ಎನ್ನುವ ಗುಣವನ್ನು ಕೈಬಿಟ್ಟಲ್ಲಿ ಬದುಕು ಬಂಗಾರವಾಗುತ್ತದೆ ಎಂದು ನುಡಿದರು.
ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ್ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಮೊಕ್ತೇಸರರಾದ ರವಿ ಆಚಾರ್ಯ ಕಾರ್ಕಳ, ಸುರೇಶ್ ಆಚಾರ್ಯ ನಿಟ್ಟೆ, ಕವಿತಾ ಹರೀಶ್ ಆಚಾರ್ಯ ಕಾರ್ಕಳ, ಜಯಪ್ರಕಾಶ್ ಆಚಾರ್ಯ ಸುರತ್ಕಲ್, ನಾರಾಯಣ ಆಚಾರ್ಯ ಸುರತ್ಕಲ್, ಕೆ.ದಿನೇಶ್ ಆಚಾರ್ಯ ಕಾರ್ಕಳ, ರತ್ನಾಕರ ಆಚಾರ್ಯ ಕಟ್ಟೆಮಾರ್ ಕಾರ್ಕಳ, ಸುಧಾಕರ ಆರ್ಯ ಕಾರ್ಕಳ, ಪುರುಷೋತ್ತಮ ಆಚಾರ್ಯ ಶಿರೂರು, ಮುಂತಾದವರು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡರು. ಪವನ್ ಸತೀಶ್ ಆಚಾರ್ಯ ಕಾರ್ಕಳ, ನಕ್ರೆ ಮಮತಾ ಕೃಷ್ನಯ್ಯ ಆಚಾರ್ಯ ಕಾರ್ಕಳ, ಹರೀಶ್ ಕಾರ್ಕಳ, ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಪಿ.ವಿ ಭಾಸ್ಕರ ಆಚಾರ್ಯ ಮುಂಬೈ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ, ಕಾಳಿಕಾಂಬಾ ಭಜನಾ ಸಮಿತಿ, ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ, ವಿಶ್ವಕರ್ಮ ಫೈನಾನ್ಸ್ ಕಾರ್ಕಳ ಇವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಶ್ರೀ ಕಾಳಿಕಾಂಬಾ ಭಜನಾ ಸಮಿತಿ ಇವರಿಂದ ಭಜನಾ ಸಂಕೀರ್ತನಾ ಸೇವೆ ನಡೆಯಿತು.
ಸಮಾರಂಭದಲ್ಲಿ ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ.ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಸೆಟ್ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಎಚ್.ರತ್ನಾಕರ ಆಚಾರ್ಯ ಉದ್ಯಾವರ, ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ಪ್ರಶಾಂತ ಆಚಾರ್ಯ ಕಟಪಾಡಿ, ರಾಘವೇಂದ್ರ ಆಚಾರ್ಯ, ವಿವೇಕ್ ಆಚಾರ್ಯ ಮಂಚಕಲ್, ದಿನೇಶ್ ಆಚಾರ್ಯ ಪಡುಬಿದ್ರಿ, ಕನ್ಯಾನ ಜನಾರ್ಧನ ಆಚಾರ್ಯ, ಯೋಗೀಶ್ ಆಚಾರ್ಯ ಕರಂಬಳ್ಳಿ, ಪಿ.ವಿ ಅಚ್ಯುತ ಆಚಾರ್ಯ ಉಡುಪಿ, ಪುರುಶೋತ್ತಮ ಆಚಾರ್ಯ ಪುತ್ತೂರು, ಶ್ರೀಧರ ಜೆ ಆಚಾರ್ಯ ಕಟಪಾಡಿ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಗಣೇಶ್ ಆಚಾರ್ಯ ಕೋಟ, ರಮಾ ಎನ್. ಆಚಾರ್ಯ ಕಾರ್ಕಳ, ಸುಮಾ ಆರ್. ಆಚಾರ್ಯ ಉದ್ಯಾವರ, ಸುಮನಾ ಎಸ್.ಆಚಾರ್ಯ ತ್ರಾಸಿ, ರಮಾ ಎ. ಆಚಾರ್ಯ ಉಡುಪಿ, ಶಾಲಿನಿ ಎಸ್. ಆಚಾರ್ಯ ಕಟಪಾಡಿ, ಲತಾ ಎಸ್. ಆಚಾರ್ಯ ಕುತ್ಯಾರು, ಗೀತಾಚಂದ್ರ ಆಚಾರ್ಯ, ಜ್ಯೋತಿ ಆರ್. ಆಚಾರ್ಯ ಉಡುಪಿ, ಆಶಾ ಎನ್.ಆಚಾರ್ಯ ಕಾಡಬೆಟ್ಟು, ಜಯಶ್ರೀ ಜಿ. ಆಚಾರ್ಯ ಕೆಮ್ಮಣ್ಣು, ಗಾಯತ್ರಿ ಗುರುರಾಜ್ ಆಚಾರ್ಯ, ದೀಪಾ ಎಸ್. ಆಚಾರ್ಯ ಕಟಪಾಡಿ, ವಸಂತ ಆಚಾರ್ಯ ಮಜೂರು ಮುತಾದವರು ಉಪಸ್ಥಿತರಿದ್ದರು. ಮಹಾಸಂಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
