ಮಂಜೇಶ್ವರ : ಹೈಕೋರ್ಟ್ ಆಜ್ಞೆಯನ್ನು ಧಿಕ್ಕರಿಸಿ ಕೇರಳದವರನ್ನು ತಡೆಯುವ ಕರ್ನಾಟಕದ ಗಡಿ ನೀತಿಯ ವಿರುದ್ಧ CPI(M) ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ತಲಪಾಡಿಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದುಮ ಶಾಸಕ ಸಿ.ಎಚ್ ಕುಂಞಂಬು ಉದ್ಘಾಟಿಸಿದರು. ಅರವಿಂದ ಸಿ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ರಝಕ್ ಚಿಪ್ಪಾರ್ ಸ್ವಾಗತಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಕೆ. ಆರ್ ಜಯಾನಂದ,ಶಂಕರ್ ರೈ ಮಾಸ್ಟರ್, ಭಾರತಿ ಸುಳ್ಯಮೆ,ಡಿ. ಸುಬ್ಬಣ್ಣ ಆಳ್ವ ಮಾತನಾಡಿದರು.ಕೆ. ಕಮಲಾಕ್ಷ, ಡಿ. ಕಮಲಾಕ್ಷ, ಶ್ರೀನಿವಾಸ ಭಂಡಾರಿ, ಅಬ್ದುಲ್ಲ, ಶ್ರೀಧರ ಕುಂಜತ್ತೂರ್, ಗೀತಾ ಸಾಮಾನಿ,ನವೀನ್ ತಚ್ಚಿರೆ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು. ಡಿ. ಬೂಬ ವಂದಿಸಿದರು.
ಹೈಕೋರ್ಟ್ ಆಜ್ಞೆಯನ್ನು ಧಿಕ್ಕರಿಸಿ ಕೇರಳದವರನ್ನು ತಡೆಯುವ ಕರ್ನಾಟಕದ ಗಡಿ ನೀತಿಯ ವಿರುದ್ಧ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ಪ್ರತಿಭಟನೆ
August 23, 2021
0
Tags
