ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸುಸಂದರ್ಭದಲ್ಲಿ ಮಹಾಸಂಸ್ಥಾನದ ಶ್ರೀಸರಸ್ವತೀ ಮಾತೃ ಮಂಡಳಿಯ ವತಿಯಿಂದ ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಪ್ರಜ್ಞೆ ಎಂಬ ವಿಷಯದಲ್ಲಿ ಮಹಿಳಾ ವಿಚಾರ ಗೋಷ್ಠಿ ಆಗಸ್ಟ್ 25 ರಂದು ಅಪರಾಹ್ನ 2.30 ಗಂಟೆಗೆ ನಡೆಯಲಿದೆ.
ವಿಚಾರ ಗೋಷ್ಠಿಯಲ್ಲಿ ಹೇಮಲತಾ ಎನ್. ಸ್ವಾಮೀಜಿ ಶಿಕಾರಿಪುರ, ನಳಿನಾಕ್ಷಿ ವಿ. ಆಚಾರ್ಯ ಕಲ್ಲಡ್ಕ, ಅಕ್ಷತಾ ಬಜ್ಪೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಲತಾ ಎಸ್. ಆಚಾರ್ಯ ಕುತ್ಯಾರು, ಗುಲಾಭಿ ಪಟ್ಟಾಭಿರಾಮನ್ ಕೊಕ್ಕರ್ಣೆ, ಲೀಲಾವತಿ ಅಪ್ಪಯ್ಯ ಆಚಾರ್ಯ ಪೈಕ, ಚಿತ್ರಕಲಾ ದೇವರಾಜ ಆಚಾರ್ಯ ಕುಂಬಳೆ, ಶ್ರೇಯಾ ಆಚಾರ್ಯ ಆಲಂಗಾರು ಇವರಿಗೆ ಅಭಿನಂದನೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ವಹಿಸಲಿದ್ದು ಗೌರವಾಧ್ಯಕ್ಷೆ ಮಾತೋಶ್ರೀ ಸರಳಮ್ಮಾ ಜಿ.ಸ್ವಾಮೀಜಿ ಶಿಕಾರಿಪುರ, ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ, ಭಾಗವಹಿಸುವರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡುವರು. ಪ್ರಸ್ತುತ ಕಾರ್ಯಕ್ರಮವನ್ನು ಮಹಾಸಂಸ್ಥಾನದ ದಿನಂಪ್ರತೀ ಪ್ರಸ್ತುತವಿರುವ ಆನ್ಲೈನ್ ಝೂಮನಲ್ಲಿ ಪ್ರಸಾರ ಮಾಡಲಾಗುವುದು. ಕೋವಿಡ್ ೧೯ ರ ನಿಯಮಾವಳಿಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲಾ ದೇವಸ್ಥಾನಗಳ ಮಹಿಳಾ ಮಂಡಳಿಯವರು ಹಾಗೂ ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಂಘಗಗಳ ಸದಸ್ಯೆಯರು ಪಡುಕುತ್ಯಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕೆಂದು ಮಾತೃಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ ಅವರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
