ವರದಿ : ರತನ್ ಕುಮಾರ್ ಹೊಸಂಗಡಿ
ಶ್ರೀ ಅರಸು ಫ್ರೆಂಡ್ಸ್ ಕ್ಲಬ್ (ರಿ.) ಮಜಲು ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
August 01, 2021
0
ಮಂಜೇಶ್ವರ:- ಶ್ರೀ ಅರಸು ಫ್ರೆಂಡ್ಸ್ ಕ್ಲಬ್ (ರಿ.) ಮಜಲು ಕುಂಜತ್ತೂರು. ಇದರ 23 ನೇ ವಾರ್ಷಿಕ ಮಹಾಸಭೆಯು ಕ್ಲಬ್ಬಿನ ಕಛೇರಿಯಲ್ಲಿ ಇಂದು ಸಂಜೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಮೋಹನ್ ಮಜಲ್ರವರು ವಹಿಸಿದ್ದರು. ಸಭೆಯಲ್ಲಿ ಕ್ಲಬ್ಬಿನ ಗೌರವಧ್ಯಕ್ಷರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಹಾಗೂ ಶ್ರೀ ರಾಮ ಮಜಲು ಉಪಸ್ಥಿತರಿದ್ದರು. ವಾರ್ಷಿಕ ಲೆಕ್ಕ ಪತ್ರವನ್ನು ಶ್ರೀ ಅಜಿತ್ ಮಜಲ್ ಮಂಡಿಸಿದರು. ಬಳಿಕ 2021-22 ನೇ ವರ್ಷದ ನೂತನ ಸಾಲಿನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಅಜಿತ್ ಮಜಲ್, ಉಪಾಧ್ಯಕ್ಷರುಗಳಾಗಿ ಹರೀಶ್ ಮಜಲ್, ವಿವೇಕ್ ಮಜಲ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಮಜಲ್, ಜತೆ ಕಾರ್ಯದರ್ಶಿಯಾಗಿ ರಂಜಿತ್ ಪದವು, ಕ್ರೀಡಾ ಕಾರ್ಯದರ್ಶಿಯಾಗಿ ಜಿತೇಶ್ ಮಜಲ್, ಕೋಶಾಧಿಕಾರಿಯಾಗಿ ರಾಜೇಶ್ ಭಂಡಾರಿ, ಗೌರವ ಸಲಹೆಗಾರರಾಗಿ ರವಿ ಮಜಲು, ಅಶೋಕ್ ಮಜಲ್, ಸಂಚಾಲಕರಾಗಿ ಮೋಹನ್ ಮಜಲ್, ರಾಘವ ಮಜಲ್, ಬಾಲಗೋಕುಲ ನಿರ್ವಾಹಕರಾಗಿ ನವೀನ್ ಮಜಲ್, ಹೇಮಚಂದ್ರ ಮಜಲ್ರವರನ್ನು ಆಯ್ಕೆ ಮಾಡಲಾಯಿತು. ರವಿ ಮಜಲ್ ಸ್ವಾಗತಿಸಿ, ಅಕ್ಷಯ್ ಮಜಲ್ ವಂದಿಸಿದರು.
Tags
