ಮಂಗಳೂರು : ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡ ಆಡಿನ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಅಪಾಯ ತಂದು ಕೊಂಡ ಘಟನೆ ಇಂದು ಬೆಳಗ್ಗೆ ಬೈಕಂಪಾಡಿ ಜೋಕಟ್ಟೆಯಲ್ಲಿ ನಡೆದಿದೆ. ಬೈಕಂಪಾಡಿ ಅಂಗಾರ ಗುಂಡಿ ನಿವಾಸಿ ಚೇತನ್ ಕುಮಾರ್(21) ಅಪಾಯ ತಂದು ಕೊಂಡ ಯುವಕ. ಇಂದು ಬೆಳಿಗ್ಗೆ ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಜೋಕಟ್ಟೆಯ ತನ್ನ ಮನೆಯಿಂದ ಹೊರಟಾಗ ರೈಲ್ವೆ ಹಳಿಯಲ್ಲಿ ಒಂದು ಆಡಿನ ಮರಿ ಸಿಲುಕಿರುದನ್ನು ಕಂಡು ಆ ಆಡಿನ ಮರಿಯ ಜೀವವನ್ನು ಕಾಪಾಡಲು ಹೋಗಿ ತನ್ನ ಜೀವವನ್ನು ಅಪಾಯಕ್ಕೆ ತಂದು ಕೊಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಆಡಿನ ಮರಿಯನ್ನು ಕಾಪಾಡುವಾಗ ಅಕಸ್ಮಾತ್ ಆಗಿ ಬಂದಂತ ರೈಲು ತನ್ನ ಕಾಲಮೇಲೆ ಚಳಿಸಿ ಎರಡೂ ಕಾಲುಗಳನ್ನು ತುಂಡರಿಸಿಕೊಂಡು ಹೋಗಿದೆ.
ತಕ್ಷಣ ಎ. ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಮನೆಗೆ ಆಧಾರ ವಾಗಿದ್ದ ಮನೆ ಮಗನ ಈ ಅಪಘಾತ ಬರಸಿಡಿಲಿನಂತೆ ಬಂದೆರಗಿದೆ. ಚಿಕಿತ್ಸೆಗಾಗಿ ಸುಮಾರು 18ಲಕ್ಷ ರೂ ಗಳ ಅಗತ್ಯವಿದ್ದು ಎಲ್ಲಾ ಸಂಘ ಸಂಸ್ಥೆಗಳ ಬಳಿ, ಸಹೃದಯಿ ದಾನಿಗಳಲ್ಲಿ ಕುಟುಂಬವು ಮನವಿ ಮಾಡಿಕೊಂಡಿದೆ. ಸಹಾಯ ಮಾಡುವ ಸಹೃದಯಿ ದಾನಿಗಳು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ತಮ್ಮ ಕೈಲಾದ ಸಹಕಾರವನ್ನು ನೀಡಬಹುದಾಗಿದೆ.
Account details:- ASHALATHA
Account Number :20320493729
IFSC CODE : SBIN0015314
State Bank of India.
Google Pay 9108769904.
ವರದಿ : ಅಂತರ್ಜಾಲ
