ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧಿಪತಿ ಜಗದ್ಗುರು ಅನಂತಶ್ರೀವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ 17ನೇ ಚಾತುರ್ಮಾಸ್ಯವ್ರತ ಆಚರಣೆಯ ಸಮಾರೋಪ ಸಮಾರಂಭವು ಸೆ. 20ರಂದು ಪಡುಕುತ್ಯಾರಿನಲ್ಲಿ ನಡೆಯಿತು.
ಚಾತುರ್ಮಾಸ್ಯ ವೃತಾಚರಣೆಯ ಸಮಾರೋಪದ ಪ್ರಯುಕ್ತ ಪಡುಕುತ್ಯಾರಿನಲ್ಲಿ ವಿಶ್ವಕರ್ಮ ಯಜ್ಞ ಹಾಗೂ ಸೀಮೋಲ್ಲಂಘನ ನಡೆಯಿತು. ಬಳಿಕ ದಿಗ್ವಿಜಯ ಮೆರವಣಿಗೆಯೊಂದಿಗೆ ಕಟಪಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನ, ನಿಕಟಪೂರ್ವ ಯತಿ ಅನಂತ ಶ್ರೀ ವಿಭೂಷಿತ ನಾಗ ಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಧಿಷ್ಠಾನ ಸಂದರ್ಶನ, ಕಟಪಾಡಿ ಆನೆಗೊಂದಿ ಮಹಾಸಂಸ್ಥಾನ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಕುತ್ಯಾರು ಶ್ರೀ ದುರ್ಗಾ ಮಂದಿರ ಸಂದರ್ಶನ ಬಳಿಕ ಪಡುಕುತ್ಯಾರು ಮಹಾಸಂಸ್ಥಾನದಲ್ಲಿ ಗುರುಪಾದುಕಾ ಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಿತು.
ದಿಕ್ಸೂಚಿ ಭಾಷಣ ಮಾಡಿದ ವಿದ್ವಾನ್ ವೇದಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಮಾತನಾಡಿ, ಗುರುಪರಂಪರೆಯನ್ನು ಅನೂಚಾನವಾಗಿ ಗೌರವಿಸಿ, ಆರಾಧಿಸುವುದರಿಂದ ಗುರುಗಳ ಅನುಗ್ರಹ ಪ್ರಾಪ್ತವಾಗುತ್ತದೆ. ಲೋಕಲ್ಯಾಣಕ್ಕಾಗಿ ಗುರುಗಳಿಂದ ಚಾತುರ್ಮಾಸ್ಯ ವೃತಾಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಗುರುಗಳ ಸೇವೆ ಮಾಡಿದಲ್ಲಿ ಗುರುಶಾಪದಿಂದ ಮುಕ್ತರಾಗಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಆನೆಗುಂದಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಯಜ್ಞ, ಜ್ಞಾನ ಯಜ್ಞ, ಧರ್ಮ ಯಜ್ಞ, ಸೇವಾ ಯಜ್ಞ ಸಹಿತವಾದ ವಿವಿಧ ಸೇವಾ ಕಾರ್ಯಗಳು ಎಲ್ಲರಿಗೂ ಅನುಕರಣೀಯವಾಗವಂತದ್ದಾಗಿದೆ. ಇಂತಹ ಸೇವೆಗೆ ನಾವೆಲ್ಲರೂ ಕೈಜೋಡಿಸುವ ಅಗತ್ಯತೆ ಯಿದೆ ಎಂದರು.
ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಮನುಷ್ಯನ ಜೀವನದಲ್ಲಿ ಕಷ್ಟ ಮತ್ತು ಸುಖ ಎರಡೂ ಸಮಾನವಾಗಿ ಬರುತ್ತದೆ. ಕಷ್ಟ ಬಂದಾಗ ಆತ್ಮಹತ್ಯೆಯೇ ಅದಕ್ಕೆ ಪರಿಹಾರವಲ್ಲ. ಕಷ್ಟಗಳನ್ನು ಎದುರಿಸಿ ಬದುಕಿದಾಗಲೇ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯವಿದೆ. ಅದಕ್ಕಾಗಿ ನಾವು ಭಗವಂತನಿಗೆ ಶರಣಾಗಬೇಕು. ನಾವು ಭಗವಂತನಿಗೆ ಶರಣಾದರೆ ಭಗವಂತ ನಮ್ಮನ್ನು ರಕ್ಷಿಸುತ್ತಾನೆ ಎಂದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ / ಹಾಗೂ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಅಭಯಚಂದ್ರ ಜೈನ್,
ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಸದಸ್ಯ ಚಂದ್ರಯ್ಯ ಆಚಾರ್ಯ ಕಳಿ, ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಯು. ಕೆ. ಎಸ್ ಸೀತಾರಾಮ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಪ್ರಮುಖರಾದ ಯಶ್ ಪಾಲ್ ಸುವರ್ಣ ಉಡುಪಿ, ಮಿಥುನ್ ರೈ ಮಂಗಳೂರು, ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ರೂಪೇಶ್ ಆಚಾರ್ಯ ಶಿರ್ವ, ತ್ರಾಸಿ ಸುಧಾಕರ ಆಚಾರ್ಯ, ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಜಯಕರ ಆಚಾರ್ಯ ಕರಂಬಳ್ಳಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಎ ಶೇಖರ ಆಚಾರ್ಯ ಕಾಪು, ಜಯಕರ ಆಚಾರ್ಯ ಪುರೋಹಿತ್ ಮೂಡಬಿದ್ರೆ, ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಪೋಳ್ಯ ಉಮೇಶ ಆಚಾರ್ಯ ಬಂಗ್ರ ಮಂಜೇಶ್ವರ, ನೀರ್ಚಾಲು ಪರಮೇಶ್ವರ ಆಚಾರ್ಯ ಮಧೂರು, ಬೆಳಪು ಬಾಲಕೃಷ್ಣ ಆಚಾರ್ಯ ಕಟಪಾಡಿ,ಬಂಬ್ರಾಣ ಯಜ್ಞೇಶ್ ಆಚಾರ್ಯ ಮಂಗಳೂರು, ಕೆ ಹರೀಶ್ ಆಚಾರ್ಯ ಕಾರ್ಕಳ, ಕೆ. ಕೇಶವ ಆಚಾರ್ಯ ಮಂಗಳೂರು, ಪ್ರವೀಣ್ ಆಚಾರ್ಯ ರಂಗನಕೆರೆ,ಡಿ ಪ್ರಶಾಂತ್ ಆಚಾರ್ಯ ಕಟಪಾಡಿ, ಕೆ.ರಾಘವೇಂದ್ರ ಆಚಾರ್ಯ ಉಡುಪಿ,ಸುರೇಶ ಆಚಾರ್ಯ ಇರಂದಾಡಿ,ರತ್ನಾಕರ ಆಚಾರ್ಯ ಉದ್ಯಾವರ,ಶ್ರೀಧರ ಜೆ. ಆಚಾರ್ಯ ಕಟಪಾಡಿ ಮತ್ತು ಮುಂಬೈ ಸೇರಿದಂತೆ ಸಮಾಜದ 16 ಕಾಳಿಕಾಂಬ ಸಮಾಜದ ದೇವಸ್ಥಾನಗಳ ಶಿಷ್ಯವೃಂದದವರು, ಪ್ರತಿಷ್ಠಾನದ ವಲಯ ಸಮಿತಿಗಳ, ಗುರುಸೇವಾ ಪರಿಷತ್ ವಲಯ ಸಮಿತಿಗಳ ಮುಖ್ಯಸ್ಥರು, ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ
ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿಟ್ಟೆ ಸುರೇಶ್ ಆಚಾರ್ಯ ವಂದಿಸಿದರು.
