ಮಂಜೇಶ್ವರ:- ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಮಂಜೇಶ್ವರದ ವಿವಿಧ ಆಶಾ ಕಾರ್ಯಕರ್ತೆಯರನ್ನು ಇಂದು ಸಂಜೆ ಗೌರವಿಸಿ ಸನ್ಮಾನಿಸಲಾಯಿತು.
ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಸಮಿತಿ ಕೋಶಾಧಿಕಾರಿ ನ್ಯಾ.ನವೀನ್ ರಾಜ್, ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ, ಮುಖಂಡರಾದ ಯಾದವ ಬಡಾಜೆ, ರಾಜೇಶ್ ತೂಮಿನಾಡ್, ಸಂತೋಷ್ ಅಡ್ಕ, ಪದ್ಮನಾಭ ಕಡಪ್ಪರ, ಬಾಬು ಮಾಸ್ಟರ್, ಲಕ್ಷ್ಮಣ ಕುಚ್ಚಿಕ್ಕಾಡ್, ರಾಜೇಶ್ ಮಜಲ್ ಮೊದಲಾದವರು ಉಪಸ್ಥಿತರಿದ್ದರು.
