ಕಾಸರಗೋಡು:- ಮೂಲತಃ ಕಾಸರಗೋಡು ವಿವೇಕಾನಂದನಗರದ "ಶ್ರೀ ವಿಶ್ವಕರ್ಮ ನಿಲಯ" ದಲ್ಲಿ ವಾಸಿಸುತ್ತಿರುವ ಕೆರೆಮನೆ ದಿ. ರಾಘವ ಆಚಾರ್ಯರ ಧರ್ಮಪತ್ನಿ ಚಂದ್ರಾವತಿ ( 76 ) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ ಸಂಜೆ 6.40 ಕ್ಕೆ ಸ್ವ - ಗೃಹದಲ್ಲಿ ನಿಧನರಾದರು.
ಮೃತರು ಪುತ್ರನಾದ ಬೆಂಗಳೂರು ಉದ್ಯಮಿ, ಬೆಂಗಳೂರಿನ ಪ್ರಸಿದ್ಧ ಬೆನಕ ಜ್ಯುವೆಲ್ಲರಿಯ ಮಾಲಕ ದಿ. ಗಣೇಶ ಆಚಾರ್ಯರ ಕತ್ತೆರಿಗುಪ್ಪೆಯಲ್ಲಿರುವ ಮನೆಯಲ್ಲಿ ಕಳೆದ 25 ವರುಷಗಳಿಂದ ವಾಸಿಸುತ್ತಿದ್ದರು. ಇತ್ತೀಚೆಗೆ ಪುತ್ರ ನಿಧನರಾದ ಬಳಿಕ ಕಾಸರಗೋಡಿನ ವಿವೇಕಾನಂದ ನಗರದಲ್ಲಿರುವ ಮನೆಯಲ್ಲಿದ್ದರು.
ಪುತ್ರನ ಜತೆ ಬೆಂಗಳೂರಿನಲ್ಲಿರುವ ಇವರು ಪ್ರತೀ ವರುಷ ಕುಟುಂಬದ ಪೂಜಾ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳಿಗೆ ಕಾಸರಗೋಡಿನ ವಿವೇಕಾನಂದ ನಗರದಲ್ಲಿರುವ ಮನೆಗೆ ಆಗಮಿಸಿ, ಕಾರ್ಯಕ್ರಮ ಮುಗಿಸಿ ಮಗನ ಜತೆ ಬೆಂಗಳೂರಿಗೆ ಮರಳುತಿದ್ದರು. ಕಳೆದ ಆಗಸ್ಟ್ ತಿಂಗಳ 17 ರಂದು ಗಣೇಶ ಆಚಾರ್ಯರು ಸಂಜೆ ತನ್ನ ಕತ್ತೆರಿಗುಪ್ಪೆಯಲ್ಲಿರುವ ಅಂಗಡಿಯಲ್ಲಿರುವ ವೇಳೆ ಹೃದಯಾಘಾತದಿಂದ ನಿಧನರಾದರು. ಪ್ರೀತಿಯ ಪುತ್ರನ ಅಗಲುವಿಕೆಯ ನೋವಿನಲ್ಲಿ ಮೃತದೇಹದ ಜೊತೆ ಊರಿಗೆ ಆಗಮಿಸಿದ ಇವರು ಮಗನ ಅಂತ್ಯಕಾಲದ ವಿಧಿ ವಿಧಾನ ಬಳಿಕ ಕ್ರಿಯಾ ವಿಧಿಯಲ್ಲಿ ಭಾಗಿಯಾಗಿ, ಮಗನ ಕನವರಿಕೆಯಲ್ಲಿ ದಿನ ನಿತ್ಯದ ಜೀವನ ಸಾಗುತ್ತಿತ್ತು, ಈ ವೇಳೆ ಆರೋಗ್ಯದಲ್ಲಿ ಕೂಡಾ ಏರು ಪೇರಾಗಿ, ಅನಾರೋಗ್ಯದಿಂದ ಬಳಲುತ್ತಿದ್ದರು. ಮಗನ ನೋವಲ್ಲಿ ದಿನ ಕಳೆಯುತ್ತಿದ್ದ ಇವರು ನಿನ್ನೆ ಸಂಜೆ ವೇಳೆ ನಿಧನರಾದರು.
ಪ್ರೀತಿಯ ಮಗ ಅಗಲಿ ಕೇವಲ 41ನೇ ದಿನದಲ್ಲಿ ತಾಯಿಯು ಕೂಡಾ ಅಗಲಿದ್ದು, ಮನೆ ಮಂದಿಯನ್ನ ಮತ್ತೆ ಕೂಡಾ ನೋವಿಗೆ ತಳ್ಳಿದಂತಾಗಿದೆ. ಒಂದೇ ಮನೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ತಾಯಿ - ಮಗನ ನಿಧನ ಕುಟುಂಬಸ್ಥರನ್ನ ಹಾಗೂ ಪರಿಸರದವರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.
ಮೃತರು ಇತರ ಮಕ್ಕಳಾದ:- ಶಶಿಕಲಾ, ಭಾರತಿ, ಮಂಜುಳಾ, ವತ್ಸಲಾ, ವಾಸುದೇವ ಆಚಾರ್ಯ, ಹರೀಶ್ಚಂದ್ರ ಆಚಾರ್ಯ, ಆನಂದ ಆಚಾರ್ಯ, ಅಳಿಯ - ಸೊಸೆಯಂದಿರಾದ:- ಪದ್ಮನಾಭ ಆಚಾರ್ಯ ಬಾಡೂರು, ಲೋಕೇಶ ಆಚಾರ್ಯ ಅವಳ, ಸುನಿಲ್ ಆಚಾರ್ಯ ಮುನ್ನಿಪ್ಪಾಡಿ, ಜಾಹ್ನವಿ, ಜನಾರ್ಧನ ಆಚಾರ್ಯ ಮೂವಾಜೆ, ಭವಾನಿ, ಶ್ರೀಮತಿ, ಆಶಾಲತಾ, ರೇಣುಕಾ, ಏಕ ಸಹೋದರಿ ಭವಾನಿ ಪುತ್ತಿಗೆ ಮತ್ತು ಮೊಮ್ಮಕ್ಕಳು ಹಾಗೂ ಕೆರೆಮನೆ ಕುಟುಂಬಸ್ಥರು ಮತ್ತು ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ. ಮೃತರ ಪುತ್ರರಾದ ಲಕ್ಷ್ಮಣ ಆಚಾರ್ಯ ಹಾಗೂ ಗಣೇಶ ಆಚಾರ್ಯ ಬೆಂಗಳೂರು ಈ ಮೊದಲೇ ನಿಧನರಾಗಿರುವರು.
ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಇಂದು (ತಾ:- 27 - 09 - 2021 ನೇ ಸೋಮವಾರ ) ಬೆಳಗ್ಗೆ 10 ಗಂಟೆಗೆ ಮನೆಯಲ್ಲಿ ನಡೆದು ಬಳಿಕ ಕಾಸರಗೋಡು ಪಾರೆಕಟ್ಟೆ ಎ.ಆರ್ ಕ್ಯಾಮ್ಪ್ ಬಳಿ ಇರುವ ಸಾರ್ವಜನಿಕ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರ ನಿಧನಕ್ಕೆ ಕಾಸರಗೋಡು, ಕರಂದಕ್ಕಾಡ್ ಶ್ರೀ ವಿಶ್ವಕರ್ಮ ಭಜನಾ ಮಂದಿರದ ಆಡಳಿತ ಸಮಿತಿ, ಮಹಿಳಾ ಸಂಘ, ಯುವಕ ಸಂಘ, ಮಧೂರು ಶ್ರೀ ಕಾಳಿಕಾಂಬ ಮಠ, ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬ ದೇವಸ್ಥಾನ, ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ, ಕೋಟೆಕ್ಕಾರು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಸಮಿತಿ, ಕಾಸರಗೋಡಿನ ವಿಶ್ವಕರ್ಮ ಸಮಾಜ ಭಾಂದವರು ಗಾಢವಾದ ಸಂತಾಪ ಸೂಚಿಸಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
