ಮಂಜೇಶ್ವರ:- ಮಂಜೇಶ್ವರ ಕಲಾ ಸ್ಪರ್ಶಂ ಸಭಾಂಗಣದಲ್ಲಿ ಹಿರಿಯ ಕಾಂಗ್ರೆಸ್ ನೇತಾರ P. A ರಹ್ಮಾನ್ ನಿಧನಕ್ಕೆ ಮಂಜೇಶ್ವರ ಬ್ಲಾಕ್ O.B.C ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಲಾಯಿತು.
ಕಾಸರಗೋಡು ಮಾಜಿ ಸಂಸದ ಐ. ರಾಮ ರೈ ಯವರ ನಿಕಟ ವರ್ತಿ ಯಾದ ಶ್ರೀ P.A ರಹ್ಮಾನ್ ರವರು ಸುಮಾರು 50 ವರ್ಷಗಳಿಂದ ಕಾಂಗ್ರೆಸ್ ನ ನಿಸ್ವಾರ್ಥ ಕಾರ್ಯಕರ್ತರಾಗಿದ್ದು, ಮಂಜೇಶ್ವರ ಮಂಡಲ ಕಾಂಗ್ರೆಸ್ ಪದಾಧಿಕಾರಿಯಾಗಿ, ಮಂಜೇಶ್ವರ ಮಂಡಲ ಅಧ್ಯಕ್ಷರಾಗಿ, ಮಂಜೇಶ್ವರ ಬ್ಲಾಕ್ ಕಾಂಗ್ರೆಸಿನ ಕೋಶಾಧಿಕಾರಿಯಾಗಿ
ಕಾರ್ಯನಿರ್ವಹಿಸಿದ್ದರು. ಹಾಗೂ ಪೊಸೋಟು ಜಮಾತ್ ಕಮಿಟಿಯ ಮಾಜಿ ಅಧ್ಯಕ್ಷರೂ, ಕಾರ್ಯದರ್ಶಿಯಾಗಿಯೂ, ಹಲವು ಧಾರ್ಮಿಕ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದರು. ಇವರ ಅಗಲುವಿಕೆ ಕಾಂಗ್ರೆಸ್ಸಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸಭೆಯನ್ನು ಉದ್ದೇಶಿಸಿ ಮಂಜೇಶ್ವರ O.B.C ಕಾಂಗ್ರೆಸ್ಸಿನ ಬ್ಲಾಕ್ ಅಧ್ಯಕ್ಷರಾದ ಇದ್ರಿಸ್ ಮಂಜೇಶ್ವರ ಸಂಸ್ಮರಣಾ ಭಾಷಣ ಮಾಡಿದರು.
O.B.C ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ರವೀಂದ್ರ ಮಾಸ್ಟರ್, ಕಾಂಗ್ರೆಸ್ ಯುವ ನೇತಾರ B.M ಆಹ್ಮದ್ ಮನ್ಸೂರ್, ಶುಭಾಷ್, ಮಣಿಕಂಠ, ಸಂತೋಷ್ ಕುಮಾರ್, ಬಾಲು, ಅಬ್ದುರ್ರಹ್ಮಾನ್, ಮಧವ, ನಿತೀಶ್ ಕುಮಾರ್, ಮೊದಲಾದವರು ಉಪಸ್ಥರಿದ್ದರು.
