ಮಂಜೇಶ್ವರ:- ಮೀನುಗಾರಿಕೆ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಬ್ಲೂ ಏಕನೊಮಿ ಕಾಯ್ದೆ ಪರಂಪರಾಗತ ಮೀನುಗಾರಿಕೆ ಕಾರ್ಮಿಕರಿಗೆ ದೋಷಕರವಾಗಿದೆ. ಕೇಂದ್ರ ಪಿಶರೀಸ್ ನಿಯಮ ಕಾರ್ಮಿಕ ವಿರುದ್ಧವಾಗಿದೆ. ಈ ಕಾಯ್ದೆಯನ್ನು ಹಿಂದೆಗೆಯಬೇಕು, ಕಡಲನ್ನು ಬಂಡವಾಳ ಶಾಹಿಗಳಿಗೆ ಬರೆದುಕೊಡಬಾರದು, ಮೀನುಗಾರಿಕೆಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಬಾರದು, ಮೀನು ಕಾರ್ಮಿಕರು ನಾಡಿನ ಕಾವಲು ಸೇನೆ, ಮೀನು ಕಾರ್ಮಿಕರ ಉಪ ಜೀವನವನ್ನು ತಡೆಯಬಾರದು, ಮೀನು ಕಾರ್ಮಿಕರು ಅಭಿವೃದ್ಧಿ ವಿರೋಧಿಗಳಲ್ಲ, ಕಾರ್ಮಿಕರ ಹಕ್ಕುಗಳನ್ನು ಕಸಿಯಬಾರದು, ಕಡಲು ನಮ್ಮ ಸಂಪತ್ತು ಎಂಬ ಘೋಷಣೆಯನ್ನು ಕೂಗಿ
ಮೀನು ಕಾರ್ಮಿಕರು ಕಡಲಿನ ಮಕ್ಕಳು ನಮ್ಮ ಹೋರಾಟ ನಿರಂತರವಾಗಿ ನಡೆಯುವುದಾಗಿದೆ ಎಂದು ಪ್ರತಿಜ್ಞೆಗೈದು, ಕೇಂದ್ರ ಸರ್ಕಾರ ಮೀನುಗಾರಿಕೆ ಕಾಯ್ದೆ (ಬ್ಲೂ ಏಕನೊಮಿ) ಯನ್ನು ವಿರೋಧಿಸಿ ಸಿ.ಐ.ಟಿ.ಯು ಮೀನು ಕಾರ್ಮಿಕರ ಯೂನಿಯನ್ ರಾಜ್ಯ ವ್ಯಾಪಕ ಪ್ರತಿಭಟನೆಯನ್ನ ಇಂದು ಕೈಗೊಂಡಿದೆ. ಆ ಪ್ರಯುಕ್ತ ಮಂಜೇಶ್ವರ ಹೊಸಬೆಟ್ಟು ಕಡಪ್ಪುರದಲ್ಲಿ ನಡೆದ ಸಿ.ಐ.ಟಿ.ಯು ಮೀನು ಕಾರ್ಮಿಕರ ಯೂನಿಯನ್ ಮಂಜೇಶ್ವರ ಯೂನಿಟ್ ನೇತೃತ್ವದಲ್ಲಿ ಪ್ರತಿಜ್ಞೆಗೈದು ಪ್ರತಿಭಟನೆ ನಡೆಸಲಾಯಿತು. ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕನಿಲ ಉದ್ಘಾಟಿಸಿ ಮಾತನಾಡಿದರು. ಮೊಹಮ್ಮದ್ ಮುಸೊಡಿ ಅಧ್ಯಕ್ಷತೆ ವಹಿಸಿದರು. ಬಶೀರ್, ಅನ್ಸಾರ್ ಮೊದಲಾದವರು ನೇತೃತ್ವ ನೀಡಿದರು. ಜೈನುದ್ದೀನ್ ಸ್ವಾಗತಿಸಿದರು.
