ಮಂಜೇಶ್ವರ:- ದೇಶದ ಪ್ರಧಾನಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ, ಆದರೆ ಕೇರಳದಲ್ಲಿ ಮತೀಯವಾದಿಗಳನ್ನು ಎಡರಂಗ ವೋಟ್ ಬ್ಯಾಂಕ್ ಮಾಡಲು ರಾಜಕೀಯ ತಂತ್ರ ಮಾಡುತ್ತಿದೆ. ಚರ್ಚಿನ ಗುರುಗಳು ನರ್ಕೋಟಿಕ್ ಜಿಹಾದ್ ಬಗ್ಗರ್ ಹೇಳಿದರೆ ಕೇರಳದಲ್ಲಿ ಕೆಲವರು ಕುಂಬಳಕಾಯಿ ಕಳ್ಳರಂತೆ ವರ್ತಿಸುತ್ತಾರೆ. ಇವರೇ ಮತಿಯವಾದಿಗಳು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾದ ಶ್ರೀ ಅಬ್ದುಲ್ಲಾ ಕುಟ್ಟಿ ಹೇಳಿದರು.
ಪ್ರಧಾನಿ ನರೇಂದ್ರಮೋದಿಯವರಿಗೆ ಹುಟ್ಟು ಹಬ್ಬದ ಸಂದೇಶ ತಿಳಿಸುವ ಜೊತೆಗೆ ದೇಶದ ಕೋಟ್ಯಾಂತರ ಜನತೆಗೆ ವ್ಯಾಕ್ಸಿನೇಶನ್ ನೀಡಿದ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಪೋಸ್ಟ್ ಕಾರ್ಡ್ ಅಭಿಯಾನ ಕಾರ್ಯಕ್ರಮವನ್ನ ಮಂಜೇಶ್ವರದ ಮದನಂತೇಶ್ವರ ದೇವಸ್ಥಾನ ಬಳಿಯ ಅಂಚೆ ಕಚೇರಿಯಲ್ಲಿ ಉದ್ಘಾಟಿಸಿ, ಮಾತನಾಡಿದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಬಿಜೆಪಿ ಓಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ ನ್ಯಾ. ನವೀನ್ ರಾಜ್ ಕೆ ಜೆ, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ ಎಂ, ಉಪಾಧ್ಯಕ್ಷರಾದ ಬಾಬು ಮಾಸ್ತರ್, ಮುಖಂಡರಾದ ನ್ಯಾ. ಬಾಲಕೃಷ್ಣ ಶೆಟ್ಟಿ, ಹರೀಶ್ಚಂದ್ರ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ರಾಜೇಶ್ ಮಜಲ್, ಕಾರ್ಯದರ್ಶಿ ಸಂತೋಷ್ ಅಡ್ಕ, ಯುವಮೋರ್ಛಾ ಮಂಜೇಶ್ವರ ಪಂಚಾಯತ್ ಸಮಿತಿ ಕಾರ್ಯದರ್ಶಿ ಅವಿನಾಶ್ ಹೆಗ್ಡೆ, ಜನಪ್ರತಿನಿಧಿಗಳಾದ ಶ್ರೀ ಲಕ್ಷ್ಮಣ್ ಕುಚ್ಚಿಕಾಡ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ. ಎಲ್ ಪಟ್ಟಿಲ್ತಾಡಿ, ಶ್ರೀಮತಿ ಸರೋಜಾ ಆರ್. ಬಲ್ಲಾಳ್, ಮುಂತಾದವರು ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ ಸ್ವಾಗತಿಸಿ, ಸಂತೋಷ್ ದೈಗೋಳಿ ವಂದಿಸಿದರು.
