ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಆಚರಣೆಯ ಅಂಗವಾಗಿ ಶ್ರೀ ಗುರುಸೇವಾ ಪರಿಷತ್ತು ಕೇಂದ್ರ ಮತ್ತು ವಲಯ ಸಮಿತಿಗಳ ಸಂಗಮ ಕಾರ್ಯಕ್ರಮ
September 14, 2021
0
ಉಡುಪಿ ಪಡುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಆಚರಣೆಯ ಅಂಗವಾಗಿ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಆನೆಗುಂದಿ ಶ್ರೀ ಗುರುಸೇವಾ ಪರಿಷತ್ತು ಕೇಂದ್ರ ಮತ್ತು ವಲಯ ಸಮಿತಿಗಳ ಸಂಗಮವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ರೂಪೇಶ್ ಆಚಾರ್ಯ ಶಿರ್ವ ವಹಿಸಿದ್ದರು. ಆಯುರ್ವೇದಿಕ್ ವೈದ್ಯರು ಸಮಾಜಸೇವಕರೂ ಆದ ಡಾ. ಏಳ್ಕಾನ ರವೀಂದ್ರ ಆಚಾರ್ಯ ಹುಬ್ಬಳ್ಳಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದೇ ವೇಳೆ ಆನೆಗುಂದಿ ಗುರುಸೇವಾ ಪರಿಷತ್ತು ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭವು ನಡೆಯಿತು. ಕೋವಿಡ್ ಕಾಲಾವಧಿಯಲ್ಲಿ ದುಡಿದ ಸಮಾಜಸೇವಕರಿಗೆ ಹಾಗೂ ಕೋವಿಡ್ ವಾರಿಯರ್ ಆಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ ಶಿರ್ವ ಠಾಣೆ ಎ. ಎಸ್. ಐ ಗಳಾದ ಎ.ಜೆ ಶ್ರೀಧರ ಆಚಾರ್ಯ, ಪಿ.ಕೃಷ್ಣ ಆಚಾರ್ಯ, ವೈದ್ಯಕೀಯ ವಿಭಾಗದಲ್ಲಿ ಶಾಲಿನಿ ಜಯಕರ್ ಆಚಾರ್ಯ ಕರಂಬಳ್ಳಿ, ಸಮಾಜ ಸೇವಾ ವಿಭಾಗದಲ್ಲಿ ಶಶಿಧರ ಪುರೋಹಿತ್ ಕಟಪಾಡಿ ಇವರನ್ನು ಅಭಿನಂದಿಸಲಾಯಿತು. ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಎಸ್. ವಿ ಗಂಗಾಧರ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಅವರು ಮಾತನಾಡಿದರು. ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುರು ಸೇವಾ ಪರಿಷತ್ತು ಕೇಂದ್ರ ಮತ್ತು ವಲಯ ಸಮಿತಿಗಳ ಸಂಗಮ ಕಾರ್ಯಕ್ರಮದಲ್ಲಿ ಗುರುಸೇವಾ ಪರಿಷತ್ತು ಸಮಿತಿಗಳ ಅಧ್ಯಕ್ಷರುಗಳಾದ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ ಉಡುಪಿ, ಎನ್. ಕೃಷ್ಣ ಆಚಾರ್ಯ ಉದ್ಯಾವರ , ಸಾಲಿಗ್ರಾಮ ಸತೀಶ್ ಆಚಾರ್ಯ ಕೋಟ, ಪುರುಷೋತ್ತಮ ಆಚಾರ್ಯ ಪುತ್ತೂರು,ಪುರಂದರ ಆಚಾರ್ಯ ವಿಟ್ಲ, ಕೆಮ್ಮಣ್ಣು ಗಣೇಶ ಆಚಾರ್ಯ ಮಂಗಳೂರು, ಅಶೋಕ ಆಚಾರ್ಯ ಮಂಜೇಶ್ವರ , ಎಂ ಇ ಮಾಧವ ಆಚಾರ್ಯ ಮಂಗಲ್ಪಾಡಿ, ಜಗದೀಶ ಆಚಾರ್ಯ ವರ್ಕಾಡಿ, ಸತೀಶ್ ಆಚಾರ್ಯ ಬೆಂಗಳೂರು ಮಾತನಾಡಿದರು.ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಲೋಲಾಕ್ಷ ಶರ್ಮ ಕಟಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ ಎಂ . ಗಂಗಾಧರ ಆಚಾರ್ಯ ಕೊಂಡೆವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಗಣೇಶ್ ಆಚಾರ್ಯ ಕೋಟ ವಂದಿಸಿದರು. ಆಸೆಟ್ ಅಧ್ಯಕ್ಷ ತ್ರಾಸಿ ಸುಧಾಕರ್ ಆಚಾರ್ಯ, ಗೋವು ಪರ್ಯಾವರಣ್ ಸಂರಕ್ಷಣಾ ಅಧ್ಯಕ್ಷ ಜಯಕರ ಆಚಾರ್ಯ ಕರಂಬಳ್ಳಿ, ಶ್ರೀ ಸರಸ್ವತೀ ಮಾತೃ ಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಗುರು ಸೇವಾ ಪರಿಷತ್ತಿನ ವಿವಿಧ ವಲಯ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಪ್ರತಿಷ್ಠಾನದ ಪದಾಧಿಕಾರಿಗಳು ವಿಶ್ವಸ್ಥರು ಭಾಗವಹಿಸಿದ್ದರು.
Tags
