ಮಂಜೇಶ್ವರ:- ಉದ್ಯಾವರ 10 ನೇ ಮೈಲು ನಿವಾಸಿ, ನಿಷ್ಠಾವಂತ ಸಹೃದಯಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಆಚಾರ್ಯ (47) ನಿಧನರಾದರು.
ಮಂಗಳೂರಿನ ಸೋಲಾರ್ ಕಂಪೆನಿಯೊಂದರಲ್ಲಿ ನಿರ್ವಾಹಕರಾಗಿ ಹಲವು ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮೊನ್ನೆ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆ ಮಂಗಳೂರು ಜಪ್ಪುವಿನ ಮನೆಯೊಂದರ ಮಹಡಿ ಮೇಲೆ ಸೋಲಾರ್ ಪೆನೆಲ್ ಜೋಡಿಸಿ, ಏಣಿಯಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿ ಕೆಳಗೆ ಬಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಿ ತೀರ್ವ ನಿಗಾಘಟಕದಲ್ಲಿ ಕೋಮಾವಸ್ಥೆಯಲ್ಲಿದ್ದರು. ನಿನ್ನೆ ಸಂಜೆ 6 ಗಂಟೆ ವೇಳೆ ನಿಧನರಾದರು. ಮೃತರು ದಿ. ಬಾಲಕೃಷ್ಣ ಆಚಾರ್ಯ - ಸೇವಂತಿ ದಂಪತಿಯ ಪುತ್ರನಾಗಿದ್ದು, ತಾಯಿ, ಪತ್ನಿ:- ಅಮೃತಾ, ಸಹೋದರ:- ರಾಜ ಡಿ.ಆಚಾರ್ಯ, ಸಹೋದರಿ:- ಅನುರಾಧ ಹಾಗೂ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.
ಮೃತರು ಸಾಮಾಜಿಕ ರಂಗದಲ್ಲಿ ಸಕ್ರೀಯರಾಗಿದ್ದು, ಸಹೃದಯಿ ವ್ಯಕ್ತಿತ್ವದ ಆದರ್ಶನೀಯ ಗುಣಗಳನ್ನ ಹೊಂದಿ ಸರ್ವ ಜನತೆಯ ಅಚ್ಚು ಮೆಚ್ಚಿನ ಯುವಕನಾಗಿದ್ದರು. ಉದ್ಯಾವರ ಹತ್ತನೇ ಮೈಲ್ಲಿನಲ್ಲಿರುವ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ (ರಿ.) ನ ಪಧಾಧಿಕಾರಿಯಾಗಿದ್ದಾರೆ. ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಮೃತರ ನಿಧನಕ್ಕೆ ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ, ವಿವೇಕಾನಂದ ಫ್ರೆಂಡ್ಸ್ ಸರ್ಕಲ್ (ರಿ.) ಉದ್ಯಾವರ, ಓಂ ಶಕ್ತಿ ಗೆಳೆಯರ ಬಳಗ ಅಂಕದಕಳ ಉದ್ಯಾವರ ಗಾಢವಾದ ಸಂತಾಪ ಸೂಚಿಸಿದ್ದಾರೆ.
