ಹಿಂದೂ ಧರ್ಮದ ಪ್ರಕಾರ ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ.
ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ.
ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.
ಚಂದ್ರಘಂಟೆಯ ಮಹತ್ವ:
ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿ ನೆಲೆಸುತ್ತದೆ.
ಚಂದ್ರಘಂಟೆಯ ಪುರಾಣ ಕಥೆ
ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.
ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.
ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.
ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.
ವಿವಾಹ ಸಂದರ್ಭದಲ್ಲಿ
ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ರಾಕ್ಷಸರಾದ ಶುಂಭ ಹಾಗೂ ನಿಶುಂಭನನ್ನು ಸೋಲಿಸುವ ಸಲುವಾಗಿ, ಪಾರ್ವತಿ ದೇವಿಯು ಕೌಶಿಕಿಯಾಗಿ ಅವತಾರವೆತ್ತುತ್ತಾಳೆ. ಕೌಶಿಕಿಯ ರೂಪವೇ ರಕ್ಕಸರ ವಿನಾಶವನ್ನು ಸೂಚಿಸುವಂತಿತ್ತು. ಶುಂಭನು ತನ್ನ ಸಹೋದರನಾದ ನಿಶುಂಭನಿಗೆ ಮದುವೆ ಮಾಡಲು ಯೋಜನೆ ಹಾಕಿದ ಶುಂಭ ಅವಳನ್ನು ಕರೆತರಲು ಧೂಮ್ರಲೋಚನನೆಂಬ ರಾಕ್ಷಸನನ್ನು ಕಳುಹಿಸುತ್ತಾನೆ. ಕೌಶಿಕಿಯು ಒಪ್ಪದಿದ್ದಾಗ ಧೂಮ್ರಲೋಚನನು ಹಲ್ಲೆಯನ್ನು ಮುಂದಾದಾಗ ಕೋಪಗೊಂಡ ಕೌಶಿಕಿ ಮಾತೆಯು ಕೇವಲ 'ಹೂಂಕಾರ'ದಿಂದಲೇ ಧೂಮ್ರಲೋಚನನ್ನು ನಿರ್ಣಾಮ ಮಾಡುತ್ತಾಳೆ.
ದುಷ್ಟರನ್ನು ಸಂಹಾರ ಮಾಡಲು ಸದಾ ಸಿದ್ಧವಾಗಿರುವ ಭಂಗಿಯಲ್ಲಿರುವ ಚಂದ್ರಘಂಟೆಯ ಘಂಟಾನಾದದಿಂದಲೇ ಸಾವಿರಾರು ಅಸುರರು ನಿರ್ನಾಮವಾದರು. ಈಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಕಷ್ಟಗಳು, ದೈಹಿಕ ನೋವು, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಸಿಂಹವಾಹಿನಿಯಾದ ಈಕೆಯು ಭಕ್ತರಲ್ಲಿ ನಿರ್ಭಯತೆಯನ್ನು ಮೂಡಿಸುತ್ತಾಳೆ
ಬೂದು ಬಣ್ಣ:
ತಾಯಿ ಚಂದ್ರಘಂಟೆಗೆ ನವರಾತ್ರಿಯ ಮೂರನೇ ದಿನ ಮೀಸಲು. ಈ ತಾಯಿಯು ಬೂದು ಬಣ್ಣವಿರುವ ಅರ್ಧ ಚಂದ್ರನ ತಿಲಕವನ್ನು ಹಣೆಯಲ್ಲಿ ಧರಿಸುತ್ತಾಳೆ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವೂ ಹೌದು. ಭಕ್ತರ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ಚಂದ್ರಘಂಟೆಯು ತೊಡೆದುಹಾಕುತ್ತಾಳೆ
ನವರಾತ್ರಿಯ ಮೂರನೇ ದಿನ ತಾಯಿ ಚಂದ್ರಕಾಂತಾ ದೇವಿಗೆ ಅರ್ಪಣೆ. ತಾಯಿಯು ಹಣೆಯ ಮೇಲೆ ಅರ್ಧಚಂದ್ರನ ತಿಲಕವನ್ನು ಹೊಂದಿದ್ದು ಶಸ್ತ್ರಸಜ್ಜಿಯ 10 ಕೈಗಳನ್ನು ಹೊಂದಿದ್ದಾಳೆ. ಹುಲಿಯ ಮೇಲೆ ಕುಳಿತಿರುವ ದೇವಿಯು ಎಲ್ಲ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾಳೆ ಎನ್ನುವ ನಂಬಿಕೆ ಇದೆ.
ಏನು ನೀಡಬೇಕು: ತಾಯಿ ಚಂದ್ರಕಾಂತಾ ದೇವಿಯನ್ನು ಒಲಿಸಿಕೊಳ್ಳಲು ಹಾಗೂ ಆಕೆಯನ್ನು ಖುಷಿಯಾಗಿಡಲು ಪಾಯಸವನ್ನು ಅರ್ಪಿಸಬೇಕು.
ನವರಾತ್ರಿ ಹಬ್ಬದ ಮೂರನೇ ದಿನದಂದು ತಾಯಿ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿಯನ್ನು ಪೂಜಿಸುವಾಗ ಆಕೆಗೆ ಹಾಲು ಅಥವಾ ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯಗಳನ್ನು ಅಥವಾ ಪಾಯಸವನ್ನು ನೈವೇದ್ಯವಾಗಿ ನೀಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರಾಗಿಸುವಳು.
ಕಮಲದ ಹೂವುಗಳನ್ನು ತಾಯಿ ಚಂದ್ರಘಂಟಾಳಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ನಿಮ್ಮೊಳಗಿನ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಮತ್ತು ನೀವು ಹೊಸ ಶಕ್ತಿಯನ್ನು ಅನುಭವಿಸುತ್ತೀರಿ.
ಚಂದ್ರಘಂಟೆಯ ಪೂಜಾ ವಿಧಿ:
ಚಂದ್ರಘಂಟೆಯ ಪೂಜಾ ವಿಧಿ:
1)ಆತ್ಮಪೂಜೆ: ಸ್ವಯಂ ಶುದ್ಧೀಕರಣಕ್ಕಾಗಿ ಆತ್ಮ ಪೂಜೆ ಮಾಡಿ.
2) ತಿಲಕ ಮತ್ತು ಆಚಮನ: ಹಣೆಯ ಮೇಲೆ ತಿಲಕ ಹಾಕಿ, ಅಂಗೈಯಿಂದ ಪವಿತ್ರ ಜಲವನ್ನು ಕುಡಿಯಿರಿ.
3) ಸಂಕಲ್ಪ: ಕೈಯಲ್ಲಿ ನೀರನ್ನು ತೆಗೆದುಕೊಂಡು ದೇವಿಯ ಮುಂದೆ ಸಂಕಲ್ಪ ಮಾಡಿಕೊಳ್ಳಿ.
4) ಆವಾಹನ ಮತ್ತು ಆಸನ: ದೇವಿಗೆ ಹೂವುಗಳನ್ನು ಅರ್ಪಿಸಿ.
5) ಪಾಧ್ಯ: ದೇವಿಯ ಚರಣಕ್ಕೆ ಜಲವನ್ನು ಪ್ರೋಕ್ಷಣೆ ಮಾಡಿ.
6) ಆಚಮನ: ಕರ್ಪೂರ ಮಿಶ್ರಿತ ನೀರನ್ನು ದೇವಿಗೆ ಪ್ರೋಕ್ಷಣೆ ಮಾಡಿ.
7) ದುಗ್ದಾಸ್ನಾನ: ಹಸುವಿನ ಶುದ್ಧ ಹಾಲಿನಿಂದ ಅಭಿಷೇಕ.
8) ಘೃತ ಮತ್ತು ಮಧುಸ್ನಾನ: ತುಪ್ಪ ಮತ್ತು ಜೇನುತುಪ್ಪವನ್ನು ಅರ್ಪಿಸಿ.
9) ಶಾರ್ಕರ ಮತ್ತು ಪಂಚಾಮೃತ ಸ್ನಾನ: ಸಕ್ಕರೆ ಮತ್ತು ಪಂಚಾಮೃತ ಸ್ನಾನವನ್ನು ಅರ್ಪಿಸಿ.
10) ವಸ್ತ್ರ: ಧರಿಸಲು ಸೀರೆ ಅಥವಾ ಬಟ್ಟೆಯನ್ನು ದೇವಿಗೆ ಅರ್ಪಣೆ ಮಾಡಿ.
11) ಚಂದನ: ದೇವಿಗೆ ಶ್ರೀಗಂಧದ ತಿಲಕವನ್ನು ಹಚ್ಚಿ. ಕುಂಕುಮ, ಕಾಡಿಗೆ, ದೂರ್ವಪತ್ರೆ ಹಾಗೂ ಬಿಲ್ವಪತ್ರೆಯನ್ನು ಅರ್ಪಿಸಿ. ಧೂಪ, ದೀಪ, ಪ್ರಸಾದಗಳಿಂದ ಅರ್ಚಿಸಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ.
ಚಂದ್ರಘಂಟೆಯ ಮಂತ್ರ:
ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
ಚಂದ್ರಘಂಟೆಯ ಪ್ರಾರ್ಥನೆ:
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
:
ಚಂದ್ರಘಂಟೆಯ ಧ್ಯಾನ:
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ
ಚಂದ್ರಘಂಟಾಗೆ ಕಮಲ ಅರ್ಪಿಸಿದರೆ ನಕಾರಾತ್ಮಕ ಶಕ್ತಿಗಳು ನಾಶ..!
ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್ಪರಂ
ಲೇಖನ : ಶ್ರೀ ಬೆಂಗಳೂರು
