ಹೊಸಂಗಡಿ: ನೇರವಾಗಿ ದೇಶದ ಜನತೆಗೆ ವಿವಿಧ ಯೋಜನೆಗಳು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಯೋಜನೆಗಳು ಜನಪರ ಕಾರ್ಯಗಳಾಗಿವೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾ ನವೀನ್ ರಾಜ್ ಹೇಳಿದರು. ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಹಮ್ಮಿಕೊಂಡಿದ್ದ ಇ-ಶ್ರಮ ಕಾರ್ಡ್ ನೋಂದಣಿ ಹಾಗೂ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಿಜೆಪಿ ಪಂಚಾಯತ್ ಸಮಿತಿ ರಾಜೇಶ ಎನ್ ತುಮಿನಾಡ್ ಅಧ್ಯಕ್ಷತೆ ವಹಿಸಿದ್ದರು, ಮಂಡಲ ಉಪಾಧ್ಯಕ್ಷ ರಾದ ಬಾಬು ಮಾಸ್ಟರ್, ಪದ್ಮನಾಭ ಕಡಪರ, ಮಂಡಲ ಪ್ರ. ಕಾರ್ಯದರ್ಶಿ ಆದರ್ಶ್ ಬಿಎಂ, ಯಾದವ ಬಡಾಜೆ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶೈಲೇಶ್ ಅಂಜರೆ, ಬಿ ಎಂ ಎಸ್ ನೇತಾರ ಭಾಸ್ಕರ ಹೊಸಂಗಡಿ, ಮೀನಾಕ್ಷಿ ಆಚಾರ್ಯ ಉಪಸ್ಥಿತರಿದ್ದರು.
ಸಂತೋಷ್ ಅಡ್ಕ ಸ್ವಾಗತಿಸಿ, ಯಶ್ಪಾಲ್ ವಂದಿಸಿದರು.
