ಶರವು ಮಹಾಗಣಪತಿ ದೇವಸ್ಥಾನ ಮಂಗಳೂರಿನಲ್ಲಿರುವ ಪ್ರಸಿದ್ಧ ಗಣೇಶ ದೇವಸ್ಥಾನ..ಇಲ್ಲಿ ಪ್ರತಿವರ್ಷ ಅನೇಕ ಜನರು ಭೇಟಿ ನೀಡುತ್ತಾರೆ...ಬಹಳ ಜಾಗೃತ ಗಣೇಶ ಎಂಬ ಖ್ಯಾತ ಈ ಗಣೇಶನದ್ದು..
ಸ್ಥಳ ಪುರಾಣ..
..
ಬಹಳ ಹಿಂದೆ ಮಹಾರಾಜ ವೀರಬಾಹು ಎಂಬುವನು ಮಂಗಳೂರು ತುಳು ಪ್ರ್ಯಾಂತ ವನ್ನು ಆಳುತ್ತಿದ್ದ.. ಒಮ್ಮೆ ಬೇಟೆಯಾಡಲು ಹೋದಾಗ ಹುಲಿಯನ್ನು ಕೊಲ್ಲುವ ಬದಲು ಅದರ ಹತ್ತಿರವಿದ್ದ ಆಕಳನ್ನು ಕೊಲ್ಲುತ್ತಾನೆ...ಆದ್ದರಿಂದ ಪಾಪಕ್ಕೆ ಗುರಿಯಾಗುತ್ತಾನೆ..
..
ಭಾರದ್ವಾಜ ಮುನಿಗಳು ಅವನಿಗೆ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಪಾಪ ಪರಿಹಾರವಾಗುವದೆಂದು ತಿಳಿಸುತ್ತಾರೆ..
ಅವರ ಸಲಹೆಯಂತೆ ರಾಜ ಶಿವನನ್ನ ಪ್ರತಿಷ್ಠಾಪಿಸಿ ಅವನನ್ನು "ಶರಭೇಶ್ವರ" ಎಂಬ ಹೆಸರಿನಿಂದ ಕರೆಯುತ್ತಾನೆ.. ಶರವು ಎಂದರೆ ಬಾಣ , ಬಾಣದಿಂದ ಆಕಳನ್ನು ಕೊಂದ ಕಾರಣ ಈ ಪ್ರದೇಶಕ್ಕೆ "ಶರವು ಮಹಾಗಣಪತಿ" ಎಂದು ಕರೆಯುತ್ತಾರೆ..
ಲೇಖನ : ಶ್ರೀ ಬೆಂಗಳೂರು
