ಬಡಾಜೆ ಅಂಗನವಾಡಿ ಸಹಾಯಕಿಗೆ ಬೀಳ್ಕೊಡುಗೆ
April 30, 2022
0
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ ವಾರ್ಡ್ ಬಡಾಜೆ ಅಂಗನವಾಡಿಯಲ್ಲಿ ಕಳೆದ 15 ವರ್ಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಶ್ರೀಮತಿ ಲಲಿತಾ ಎಮ್ ರವರಿಗೆ ಬಡಾಜೆ ವೆಲ್ ಫೇರ್ ಕಮಿಟಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಇಂದು ಅಪರಾಹ್ನ ಅಂಗನವಾಡಿಯಲ್ಲಿ ನಡೆಯಿತು. ಶ್ರೀಮತಿ ಲಲಿತಾ ಎಂ. ಇವರನ್ನು ಕಮಿಟಿ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ, ಫಲ ವಸ್ತುಗಳನ್ನು ನೀಡಿ ಗೌರವಿಸಲಾಯಿತು. ಸಿ. ಡಿ.ಪೀ ಒ (ಐಸಿಡಿಎಸ್) ಶ್ರೀಮತಿ ಜ್ಯೋತಿ ಯವರು ಕಾರ್ಯಕ್ರಮವನ್ನ ಔಪಚಾರಿಕವಾಗೀ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ ವಹಿಸಿದ್ದರು. ವೇದಿಕೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪೀ. ಎಚ್ ಅಬ್ದುಲ್ ಹಮೀದ್, ಬಡಾಜೆ ಜಿ.ಎಲ್.ಪೀ.ಎಸ್ ಶಾಲೆಯ ಮುಖ್ಹ್ಯೋಪಾಧ್ಯಾಯರಾದ ಶ್ರೀಮತಿ ಪದ್ಮಾವತಿ ಎಂ, ಸಮಾಜ ಸೇವಕ ಜನಾರ್ದನ ಐತಾಳ್, ಯುವಕ ಸಂಘ ಬಡಾಜೆಯ ಅಧ್ಯಕ್ಷರಾದ ಜಗದೀಶ್ ಕಲ್ಲಕಂಡ, ಶ್ರೀ ಮಹಾಲಿಗೇಶ್ವರ ಮಹಿಳಾ ಮಂಡಳಿಯ ಶ್ರೀಮತಿ ಪುಷ್ಪಲತಾ ಬೀ.ಕೆ, ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಬೇಬಿಲತಾ ಯಾದವ್, ಪೋಸೋಟ್ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಸುಮಂಗಲಾ ಎಂ, ಶ್ರೀಮತಿ ದಾಕ್ಷಾಯಿಣಿ ಗೇರುಕಟ್ಟೆ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಬಡಾಜೆ ಶಾಲೆಯ ಅಧ್ಯಾಪಕರಾದ ಅಶೋಕ್ ಮಾಸ್ಟರ್ ಕೊಡ್ಲಮೋಗರು ಸ್ವಾಗತಿಸಿ, ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಶಾಲಾಕ್ಷಿ ವಂದಿಸಿದರು.
Tags

