ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವರ್ಷಾವಧಿ ಉತ್ಸವಕ್ಕೆ ಆಗಮಿಸಿದ ಯು. ಟಿ ಖಾದರ್.
May 11, 2022
0
ಮಂಜೇಶ್ವರ: ಭಾವೈಕ್ಯದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ವರ್ಷಾವಧಿ ಉತ್ಸವ, ಐತಿಹಾಸಿಕ ಬಂಡಿ ಉತ್ಸವದ ಅಂಗವಾಗಿ ಇಂದು ಅಪರಾಹ್ನ ಕರ್ನಾಟಕದ ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಅವರು ಕ್ಷೇತ್ರಕ್ಕೆ ಆಗಮಿಸಿ, ಪ್ರಸಾದ ಸ್ವೀಕರಿಸಿ, ಉತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ಶ್ರೀ ಹರ್ಷಾದ್ ವರ್ಕಾಡಿ, ನ್ಯಾಯವಾದಿ ಶಿವರಾಮ ಆಳ್ವ, ಸದಾಶಿವ ಉಳ್ಳಾಲ್, ಈಶ್ವರ್ ಉಳ್ಳಾಲ, ನಾಗೇಶ್ ಮಂಜೇಶ್ವರ, ಖಲೀಲ್ ಬಜಾಲ್, ಯೋಗೀಶ್ ಉದ್ಯಾವರ್, ವೈಭವ್ ಶೆಟ್ಟಿ ತಲಪಾಡಿ ಮುಂತಾದವರು ಜತೆಗಿದ್ದರು. ಇವರನ್ನ ಕ್ಷೇತ್ರದ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.
Tags


