ಉದ್ಯಾವರ ಸಾವಿರ ಜಮಾತ್ ಸಮಿತಿ ಪದಾಧಿಕಾರಿಗಳು ಉದ್ಯಾವರ ಶ್ರೀ ದೈವಗಳ ಉತ್ಸವಕ್ಕೆ ಭೇಟಿ
May 12, 2022
0
ಮಂಜೇಶ್ವರ: ಭಾವೈಕ್ಯದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ವರ್ಷಾವಧಿ ಉತ್ಸವ, ಐತಿಹಾಸಿಕ ಬಂಡಿ ಉತ್ಸವದ ಅಂಗವಾಗಿ ಇಂದು ಅಪರಾಹ್ನ ಉದ್ಯಾವರ ಸಾವಿರ ಜಮಾತ್ ಸಮಿತಿ ಪದಾಧಿಕಾರಿಗಳು ಉದ್ಯಾವರ ಶ್ರೀ ದೈವಗಳ ಉತ್ಸವಕ್ಕೆ ಭೇಟಿ ನೀಡಿ ಶ್ರೀ ದೇವರ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಈ ವೇಳೆ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಇವರನ್ನ ಬರಮಾಡಿಕೊಂಡು, ಆತಿಥ್ಯಗಳನ್ನ ನೀಡಿ ಸ್ವಾಗತಿಸಿದರು.
Tags


