ಮುಳ್ಳೇರಿಯಾ : ಅಡ್ವಳ ಬೀಡು ಧರ್ಮದೈವ ಶ್ರೀ ಪಿಲಾಡ್ಕತ್ತಾಯ ದೈವಸ್ಥಾನ | ಪುನಃ ಪ್ರತಿಷ್ಠಾ ಬ್ರಹ್ಮಕಶೋತ್ಸವ ಮತ್ತು ಧರ್ಮ ನೇಮೋತ್ಸವ ನಾಳೆಯಿಂದ (19.05.2022ನೇ ಗುರುವಾರ) 21.05.2022ನೇ ಶನಿವಾರದವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ದಿನಾಂಕ 19.05.2022ನೇ ಗುರುವಾರ ಮತ್ತು 20.05.2022ನೇ ಶುಕ್ರವಾರದಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ಅಡ್ವಳ ಬೀಡಿನಲ್ಲಿ ನೂತನವಾಗಿ ಪುನರ್ನಿರ್ಮಿಸಲಾದ ಧರ್ಮದೈವ ಶ್ರೀ ಪಿಲಾಡ್ಕತ್ತಾಯ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದಿನಾಂಕ 21.05.2022ನೇ ಶನಿವಾರ ಬೆಳಗ್ಗೆ ಗಂಟೆ 9.00ಕ್ಕೆ ಶ್ರೀ ಪಿಲಾಡ್ಕತ್ತಾಯ ದೈವದ ಧರ್ಮನೇಮೋತ್ಸವವು ಜರಗಲಿದೆ.
(ಆಮಂತ್ರಣ ಪತ್ರಿಕೆ ಬಿಡುಗಡೆ)
ದಿನಾಂಕ 19.05.2022ನೇ ಗುರುವಾರ ಸಂಜೆ 4 ಗಂಟೆಗೆ ಉಗ್ರಾಣ ಮುಹೂರ್ತಕ್ಕೆ ದೀಪ ಪ್ರಜ್ವಲನೆ, 5ಗಂಟೆಗೆ ತಂತ್ರಿವರ್ಯರ ಆಗಮನ, 6 ಗಂಟೆಗೆ ಭಜನಾ ಸಂಕೀರ್ತನೆ
( ಶ್ರೀ ಮಹಾವಿಷ್ಣು ಭಜನಾ ಸಂಘ ಬೆಳ್ಳೂರು, ಇವರಿಂದ ), ರಾತ್ರಿ ಗಂಟೆ 7ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ವಿವಿಧ ವೈದಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ 9ಕ್ಕೆ ಅನ್ನ ಸಂತರ್ಪಣೆ. ದಿನಾಂಕ 20.05.2022ನೇ ಶುಕ್ರವಾರ ಪೂರ್ವಾಹ್ನ ಗಂಟೆ 5ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಆಮೇಲೆ 6.25ರ ವೃಷಭ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಬೆಳಗ್ಗೆ ಗಂಟೆ 8ಕ್ಕೆ ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ. 9 ಗಂಟೆಗೆ ಭಜನಾ ಸಂಕೀರ್ತನೆ
( ಶ್ರೀ ರಕ್ತೇಶ್ವರಿ ಯುವಕ ಸಂಘ ಪಿಂಡಿಕಾಯಿ, ಕಾರಡ್ಕ ಬಳಗದಿಂದ), 10.30 ರಿಂದ ರಸಮಂಜರಿ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನ ಸಂತರ್ಪಣೆ, 2ರಿಂದ
ಸಿರಿಚಂದನ ಕನ್ನಡ ಯುವಬಳಗ(ರಿ ) ಕಾಸರಗೋಡು ಇದರ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ
'ಸತ್ವ ಪರೀಕ್ಷೆ' ಜರಗಲಿರುವುದು.ಸಂಜೆ 3.30ರಿಂದ ಸೌಭದ್ರಾತನಯ ಎ. ಬಿ. ಮಧುಸೂದನ ಬಲ್ಲಾಳ್ ಇವರಿಂದ ಹರಿಕಥಾ ಕಾಲಕ್ಷೇಪ, 4.30ರಿಂದ ಗಮಕ ವಾಚನ - ಕುಮಾರವ್ಯಾಸ ವಿರಚಿತ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಿಂದ ಆಯ್ದ ಭಾಗ ( ವಾಚನ : ಶ್ರೀ ಬಾಲಗೋಪಾಲ ಬಲ್ಲಾಳ್. ಎ. ಬಿ., ಕಥಾ ಪ್ರವಚನ: ಶ್ರೀ ದಿವಾಕರ ಬಲ್ಲಾಳ್. ಎ. ಬಿ) ಪೂರ್ವಾಹ್ನ ಗಂಟೆ 5.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ 8 ರಿಂದ ಖ್ಯಾತ ಗಾಯಕರು ಮತ್ತು ಸಂಗೀತ ನಿರ್ದೇಶಕರಾದ ಶ್ರೀ ಸಂದೀಪ್ ಆರ್ ಬಲ್ಲಾಳ್ ಕೊಡ್ಲಮೊಗರು ಇವರಿಂದ ಸಂಗೀತಾರ್ಚನೆ/ ಸಂಗೀತ ರಸಮಂಜರಿ, ರಾತ್ರಿ ಗಂಟೆ 9ಕ್ಕೆ ಪಿಲಾಡ್ಕತ್ತಾಯ ದೈವದ ಭಂಡಾರ ಏರಿಸುವುದು, 9.30ರಿಂದ ಅನ್ನ ಸಂತರ್ಪಣೆ, 10.30ರಿಂದ ಯಕ್ಷಗಾನ ಬಯಲಾಟ ' ಮಹಿಷಾ ಮರ್ದಿನಿ' ಪ್ರದರ್ಶನಗೊಳ್ಳಲಿದೆ. ದಿನಾಂಕ 21.05.2022ನೇ ಶನಿವಾರ ಬೆಳಗ್ಗೆ ಗಂಟೆ 7ಕ್ಕೆ ಭಜನಾ ಸಂಕೀರ್ತನೆ ( ಶ್ರೀ ವಿಷ್ಣುಮೂರ್ತಿ ಭಜನಾ ಸಂಘ ಅಡ್ವಳ, ಇವರಿಂದ), (ಫೈಲ್ ಚಿತ್ರ)
9 ಗಂಟೆಗೆ ಧರ್ಮದೈವ ಶ್ರೀ ಪಿಲಾಡ್ಕತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 12.30 ರಿಂದ ಅರಶಿನ ಪ್ರಸಾದ ವಿತರಣೆ, 1 ಗಂಟೆಗೆ ಅನ್ನ ಸಂತರ್ಪಣೆ ಜರಗಲಿರುವುದು.
9 ಗಂಟೆಗೆ ಧರ್ಮದೈವ ಶ್ರೀ ಪಿಲಾಡ್ಕತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 12.30 ರಿಂದ ಅರಶಿನ ಪ್ರಸಾದ ವಿತರಣೆ, 1 ಗಂಟೆಗೆ ಅನ್ನ ಸಂತರ್ಪಣೆ ಜರಗಲಿರುವುದು.

