ಮಂಗಳೂರು: ತುಳುನಾಡಿನಲ್ಲಿ ನಾಗರ ಪಂಚಮಿ ಹಬ್ಬದ ಸಡಗರ. ಬೆಳಗಿನಿಂದಲೇ ಭಕ್ತರು ತಮ್ಮ ಕುಟುಂಬದ ನಾಗಬನಗಳಿಗೆ ತೆರಳಿ ಹಾಲು, ಸಿಯಾಳ ಅಭಿಷೇಕ ಮಾಡಿಸಿ, ತಂಬಿಲ ಅರ್ಪಿಸುತ್ತಿದ್ದಾರೆ.
ಶರವು, ಕುಡುಪು ಮತ್ತಿತರ ನಾಗ ಕ್ಷೇತ್ರಗಳಲ್ಲಿ ಬೆಳಗಿನಿಂದಲೇ ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸುತ್ತಿದ್ದಾರೆ.
ಮಂಗಳೂರು ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲೂ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಜರಗಿತು.ಪುತ್ತೂರು ಈಶ್ವರಮಂಗಳದ ಹನುಮಗಿರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಜರಗಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಮಳೆಯನ್ನು ಲೆಕ್ಕಿಸದೆ ನೂರಾರು ಮಂದಿ ಭಕ್ತರು ಪಾಲ್ಗೊಂಡರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರದಿಂದ ಭಾರಿ ಮಳೆಯಾಗುತ್ತಿರುವ ಕಾರಣ ಹೊರ ಭಾಗಗಳಿಂದ ಬರುವ ಭಕ್ತರ ಸಂಖ್ಯೆ ಕಡಿಮೆ ಇದೆ.





