ಕಲ್ಲಡ್ಕ : ಯುವಶಕ್ತಿ ಸೇವಾಪಥ ದ.ಕ ನೇತೃತ್ವದಲ್ಲಿ ನರಹರಿ ಶ್ರೀ ಸದಾಶಿವ ಪರ್ವತ ದೇವಸ್ಥಾನದಲ್ಲಿ ಎರಡನೇ ವರ್ಷದ ಶ್ರಮದಾನ ಹಾಗೂ ಸ್ವಚ್ಚತಾ ಅಭಿಯಾನ ನಡೆಯಿತು.
ಸ್ವಚ್ಚ ನರಹರಿಯತ್ತ ಸೇವಾಪಥದ ಚಿತ್ತ ಅಭಿಯಾನ ಜರಗಿತು. ಸುಮಾರು 80 ಕ್ಕೂ ಅಧಿಕ ಸ್ವಯಂಸೇವಕರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಓಂಶ್ರೀಸಾಯಿಗಣೇಶ್ ಸೇವಾಟ್ರಸ್ಟ್ ಕಲ್ಲಡ್ಕ, ಯುವಕೇಸರಿ ಫ್ರೆಂಡ್ಸ್(ರಿ) ಅರೆಬೆಟ್ಟು ಎರ್ಮೆಮಜಲು, ಶ್ರೀಮಂತ್ರದೇವತಾ ಜನಸೇವಾ ಟ್ರಸ್ಟ್ ಅಮ್ಟೂರು, ಕೋಡಿ ಫ್ರೆಂಡ್ಸ್ ಸರ್ಕಲ್ ಕರಿಂಗಾಣ, ಕೆ.ಎಫ್.ಎಮ್ ಮುಡಿಪು, ಹಿಂದೂ ಜನಸೇವಾ ಸಮಿತಿ ಬೊಂಡಾಲ ಕಲ್ಲಡ್ಕ, ಶಿವಛತ್ರಪತಿ ಫ್ರೆಂಡ್ಸ್ ಬಡೆಕೊಟ್ಟು, ಯುವಶಕ್ತಿ ಕಡೇಶಿವಾಲಯ(ರಿ) ತಂಡಗಳು ಸಹಯೋಗ ವ್ಯಕ್ತಪಡಿಸಿದ್ದವು.

