ಮಂಗಳೂರು : ಭಾರತೀಯ ಸೇನೆಯ ಮಾಜಿ ಸೇನಾನಿ, ಧಾರ್ಮಿಕ, ಸಾಮಾಜಿಕ ಮುಂದಾಳು, ಗಟ್ಟಿ ಸಮಾಜದ ಹಿರಿಯ ವ್ಯಕ್ತಿ ಪಿ.ಕೃಷ್ಣ ಗಟ್ಟಿಯವರಿಗೆ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಂದನೆ ಕಾರ್ಯಕ್ರಮ ಜರಗಿತು.
ಪೊಸಕುರಲ್ ಸುದ್ದಿ ಮಾಧ್ಯಮದ ಆಡಳಿತ ನಿರ್ದೇಶಕರಾದ ವಿದ್ಯಾಧರ ಶೆಟ್ಟಿ ಅಭಿನಂದನಾ ಮಾತನಾಡುತ್ತಾ ಕೃಷ್ಣ ಗಟ್ಟಿಯವರು ಸೇನಾ ವೃತ್ತಿಯಲ್ಲಿ 1965 ರಿಂದ 1983 ರ ತನಕ ದೇಶಕ್ಕಾಗಿ ಗಡಿಯಲ್ಲಿ ಶತ್ರು ರಾಷ್ಟ್ರದ ಸೈನಿಕರ ವಿರುದ್ದ ಹೋರಾಟ ಮಾಡಿ ನಿವೃತ್ತರಾದ ಬಳಿಕವೂ ಸಮಾಜ ಸೇವೆ ಮೂಲಕ ಮಾದರಿ ಜೀವನ ನಡೆಸಿದವರು. 1983, 84 ರ ಅವಧಿಯಲ್ಲಿ ಅಯೋಧ್ಯೆಯ ಪ್ರಭು ಶ್ರೀರಾಮ ಚಂದ್ರನ ದೇವಾಲಯಕ್ಕಾಗಿ ನಡೆದ ಶಿಲಾಪೂಜನ ಕಾರ್ಯಕ್ರಮದಲ್ಲಿ ಉಳ್ಳಾಲ ಭಾಗದಲ್ಲಿ ವಿಶ್ವಹಿಂದು ಪರಿಷತ್ತಿನ ಪ್ರಮುಖರಾಗಿ ಕೆಲಸ ಮಾಡಿದವರು. ಅಂತವರನ್ನು ಗುರುಪೂರ್ಣಿಮೆ ಯ ಪವಿತ್ರ ದಿನದಲ್ಲಿ ಸ್ವಗೃಹದಲ್ಲಿ ಗೌರವ ಅರ್ಪಿಸುವ ಪ್ರತಿಷ್ಠಾನದ ಕಾರ್ಯ ಸಮಾಜಕ್ಕೆ ಸ್ಪೂರ್ತಿ.
ಗುರು ವಂದನೆ ಸ್ವೀಕರಿಸಿದ ಕೃಷ್ಣ ಗಟ್ಟಿ, ಕೇವಲ 23 ನೇ ವರುಷಕ್ಕೆ ದೇಶಕ್ಕಾಗಿ ಪ್ರಾಣ ಬಲಿದಾನ ಗೈದ ಭಗತ್ ಸಿಂಗ್ ನ ಹೆಸರಿನಲ್ಲಿ ಪರಿಸರದಲ್ಲಿ ನಡೆಸುತ್ತಿರುವ ಕೆಲಸ ಶ್ಲಾಘನೀಯ.
ಪ್ರತಿಷ್ಠಾನದ ಗೌರವ ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಉಪಾಧ್ಯಕ್ಷರುಗಳಾದ ಮಾಧವ ಉಳ್ಳಾಲ, ಗೋಪಿನಾಥ್ ಬಗಂಬಿಲ, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ವೃಕ್ಷಾಂಕುರ ರಕ್ಷಾ ಸಂಚಾಲಕರಾದ ಪ್ರಸಾದ್ ಕೊಂಡಾಣ, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ಗಂಗಾಧರ ಅಂಬ್ಲಮೊಗರು, ಲಕ್ಷ್ಮೀನಾರಾಯಣ, ದೀಕ್ಷಿತ್ ನಿಸರ್ಗ, ಚಂದ್ರಶೇಖರ್ ಕೊಲ್ಯ, ರಾಧಕಾಂತ್ ಪಡಿಯಾರ್, ವಿಶ್ವನಾಥ್ ಎಲ್ಯಾರ್ ಪದವು, ಪ್ರತೀಕ್ ನಡಾರ್, ಜೀವನ್ ಸೋಮೇಶ್ವರ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪ್ರಸ್ತಾವನೆ ಗೈದರು, ಪ್ರದಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಗುರುವಂದನಾ ಪತ್ರ ವಾಚಿಸಿದರು.ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು.ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.

