ಮಂಗಳೂರು:- ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಚರಿಸುವ 31ನೇ ವರ್ಷದ ಮಂಗಳೂರು ಗಣೇಶೋತ್ಸವದ ಮಹಾಸಭೆ ಮಂಗಳೂರಿನ ಬಾಳಂಭಟ್ ಹಾಲ್ನಲ್ಲಿ ನಡೆಯಿತು.
ಹಿಂದೂ ಯುವ ಸೇನಾ ಗೌರವಾಧ್ಯಕ್ಷ ಶ್ರೀ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷರಾದ ಶ್ರೀ ಯಶೋಧರ ಚೌಟ, ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ಶಶಿಕಾಂತ್ ನಾಗ್ವೇಕರ್ 31ನೇ ವರ್ಷದ ಗಣೇಶೋತ್ಸವದ ಯಶಸ್ಸಿಗಾಗಿ ಹಿಂದೂ ಯುವ ಸೇನಾ ಕಾರ್ಯಕರ್ತರು ಸೇವಕರಾಗಿ ದುಡಿಯುವಂತೆ ಕರೆನೀಡಿದರು.
ಮಂಗಳೂರು ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಉಪಾಧ್ಯಕ್ಷರುಗಳಾದ ಉಮೇಶ್ ಪೈ, ಸುಕುಮಾರ್ ಸುರತ್ಕಲ್ ಕಿರಣ್ ರೈ ಬಜಾಲ್, ಜನಾರ್ಧನ ಅರ್ಕುಳ, ಯಾದವ ಕುಂದರ್, ಕೊರಗಪ್ಪ ಶೆಟ್ಟಿ ಆಕಾಶಭವನ, ಹಿಂದೂ ಯುವ ಸೇನಾ ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು, ಉಪಾಧ್ಯಕ್ಷ ನಾಗರಾಜ ಆಚಾರ್ಯ, ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಎಕ್ಕೂರು ವೇದಿಕೆಯಲ್ಲಿದ್ದರು.
ಹಿಂದೂ ಯುವಸೇನಾ ವಿವಿಧ ಶಾಖಾ ಪ್ರಮುಖರುಗಳು, ಸದಸ್ಯರುಗಳು, ಗಣೇಶೋತ್ಸವ ಸಮಿತಿ ಪದಾದಿಕಾರಿಗಳು, ಮಾತೃ ಮಂಡಳಿ ಸದಸ್ಯರು ಮತ್ತು ಸಭೆಯಲ್ಲಿ 300 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.



