ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಬಡವು 66ನೆ ಸೇವಾ ಕಾರ್ಯ
April 17, 2024
0
ಮೂಲ್ಕಿ : ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ 66ನೇಯ ಸೇವೆಯು ಮೂಲ್ಕಿ ಸಮೀಪದ ಯಕ್ಷಗಾನ ಕಲಾವಿದರು ಪ್ರಸಂಗಕರ್ತರು ಹಾಗೂ ಯಕ್ಷ ಗುರುಗಳಾದ ಗಣೇಶ್ ಕೊಲೆಕಾಡಿ ಎಂಬವರ ಕುಟುಂಬಕ್ಕೆ ದೈನಂದಿನ ಸಾಮಗ್ರಿ ಹಸ್ತಂತರಿಸುವ ಮೂಲಕ ನೆರವೇರಿಸಲಾಯಿತು. ಗಣೇಶ್ ಕೊಲೆಕಾಡಿ ಇವರು ಬಾಯಿಯ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಮದುವೆ ಆಗದೆ ತನ್ನ ತಾಯಿಯ ಜೊತೆ ಜೀವನ ನಡೆಸುತ್ತಿದ್ದಾರೆ.ಕ್ಯಾನ್ಸರ್ ಎಂಬ ಮಹಾಮಾರಿ ಖಾಯಿಲೆಯಿಂದ ಗುಣಮುಖರಾಗಲು ವೈದ್ಯರು ಲಕ್ಷಗಟ್ಟಲೆ ಹಣ ಖರ್ಚಾಗಬಹುದು ಎಂದು ಹೇಳಿದಾಗ ಅವರ ಶಿಷ್ಯರು, ಅಭಿಮಾನಿಗಳು ಮತ್ತು ತಮ್ಮಿಂದಾಗುವ ಧನ ಸಹಾಯ ನೀಡಿ ಸಹಕರಿಸಿದರೂ ಪ್ರತೀ ತಿಂಗಳು ಎರಡು ಲಕ್ಷದಷ್ಟು ಚಿಕಿತ್ಸೆ ಅಗತ್ಯವಿದೆ. ಈ ಸಂದರ್ಭದಲ್ಲಿ ಸಂಚಾಲಕರು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ಮತ್ತು ಗೌರವಾಧ್ಯಕ್ಷರು ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ, ಗೌರವ ಅಧ್ಯಕ್ಷರಾದ ಸದಾಶಿವ ಹೊಸಬೆಟ್ಟು, ಸಂಸ್ಥಾಪಕರು, ರಾಜ್ಯ ಸಲಹೆಗಾರರು ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು, ರಾಜ್ಯ ಅಧ್ಯಕ್ಷರು ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಸಚಿನ್ ಜಿ ಮಣೆಲ್ ಬೈಲ್, ಸಂಸ್ಥಾಪಕ ಅಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸದಸ್ಯರಾದ ರಾಜೇಂದ್ರ ಜೋಕಟ್ಟೆ, ಮಹಿಳಾ ಘಟಕ ಅಧ್ಯಕ್ಷರಾದ ರಾಜೇಶ್ವರಿ ಬಲ್ಯಾಯ, ಸದಸ್ಯರಾದ ಚೈತ್ರ ಸುಪ್ರಿಮ್, ಪೂರ್ಣಿಮಾ ರಾವ್, ಮಾಸ್ಟರ್ ಪ್ರಜ್ವಲ್ ಕೊಡಕ್ಕಲ್ ಉಪಸ್ಥಿತರಿದ್ದರು.
Tags


