ಪೆರ್ಮುದೆ: ಕಾಸರಗೋಡಿನ ರಂಗ ಚೇತನದ ತಂಡದ ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿ ಕಾಸರಗೋಡು ಇದರ ಸಹಕಾರದೊಂದಿಗೆ ಕನ್ನಡ ಶಾಲಾ ವಿದ್ಯಾರ್ಥಿಗಳ ರಂಗ ಕೌಶಲ್ಯಗಳಿಗ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರೀ ಪ್ರೌಢ ಶಾಲೆಯಲ್ಲಿ ಅಯೋಜಿಸಲಾದ "ಚಿತ್ತಾರ -2024" ಚಲನಚಿತ್ರ ನಟ ರವಿ ರಾಮಕುಂಜೆ ರವರ ದಿವ್ಯ ಹಸ್ತದಲ್ಲಿ ಉದ್ಘಾಟನೆಗೊಂಡ ತ್ರಿದಿನ ಸನಿವಾಸ ಶಿಬಿರ ಶುಕ್ರವಾರ ಸಮಾಪ್ತಿಗೊಂಡಿತು.ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ರಂಗ ಚೇತನದ ಅಧ್ಯಕ್ಷ ಬಾಲಕೃಷ್ಣ ಅಡೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್, ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್, ಮಾತೃ ಸಂಘದ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಗೋಪಾಲ ಮಾಸ್ತರ್ ಕಾಟುಕುಕ್ಕೆ ಮೊದಲಾದವರು ಮಾತನಾಡಿದರು.
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಸಾದ್ ಪಾಲೆಂಗ್ರಿ, ಜೀವನ್ ಕುಮಾರ್ ಚಿಗುರುಪಾದೆ, ಸಾವಿತ್ರಿ ಟೀಚರ್ ಮೀಯಪದವು, ರಾಮ್ ಮೋಹನ್ ಚಕ್ಕೆ, ಡಿಡಿಇ ನಂದೀಕೇಶನ್, ರಘರಾಮ ಭಟ್,ನಾರಾಯಣ ದೇಲಂಪಾಡಿ, ಸುರೇಶ್ ಜ್ಯೋತಿಷ್ಯರು ಧರ್ಮತಡ್ಕ, ಚಿಣ್ಣರ ಚಿಲುಮೆಯ ರಾಜೇಶ್ ಮಾಸ್ತರ್ ಕೊಡ್ಲಮೊಗರು ಶಿಬಿರಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.ರಂಗಚೇತನದ ಜತೆ ಕಾರ್ಯದರ್ಶಿ ಸದಾಶಿವ ಬಾಲಮಿತ್ರ ಸ್ವಾಗತಿಸಿ ಕಾರ್ಯದರ್ಶಿ ಆಶೋಕ್ ಕೊಡ್ಲಮೊಗರು ವಂದಿಸಿದರು. ದಿವಾಕರ ಬಲ್ಲಾಳ್ ಎ.ಬಿ. ನಿರೂಪಿಸಿದರು.

ಶಿಬಿರಾರ್ಥಿಗಳಿಗೆ ಶಾರೀರಿಕ ಶಿಕ್ಷಕಿ ಸೌಮ್ಯಶ್ರೀ, ಮಕ್ಕಳ ರಂಗತಜ್ಞ ಉದಯ ಸಾರಂಗ್, ಶಶಿ ಕುಳೂರು, ಮನೀಶ್ ಪಿಂಟೋ ಮಂಗಳೂರು, ನಿರ್ಮಲ್ ಕುಮಾರ್, ದಿವಾಕರ ಬಲ್ಲಾಳ್, ಪ್ರಸಾದ್ ಮುಗು, ರಾಜು ಕಿದೂರು, ಸದಾಶಿವ ಬಾಲಮಿತ್ರ, ಅಶೋಕ್ ಕೊಡ್ಲಮೊಗರು, ದಿವಾಕರ ಬಳ್ಳಾಲ್, ರಾಜ್ ಕುಮಾರ್ ಕಾಟುಕುಕ್ಕೆ, ವಸಂತ ಮೂಡಂಬೈಲ್, ರಾಮ ಮೋಹನ ಸಿ.ಎಚ್, ಗಾಯತ್ರಿ ಕಡಂಬಾರ್, ಪ್ರಕಾಶ್ ಕುಂಬಳೆ, ವಿಜಯ ಕುಮಾರ್ ಪಾವಳ, ಬಾಲಕೃಷ್ಣ ಅಡೂರು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು. ಶಿಬಿರದ ನೇತೃತ್ವವನ್ನು ಯತೀಶ್ ಕುಮಾರ್ ರೈ ಮುಳ್ಳೇರಿಯ, ಗೋಪಾಲ ಮಾಸ್ತರ್ , ಶಿವರಾಮ್ ಕಾಟುಕುಕ್ಕೆ, ಶಿವ ಚೆರುಗೋಳಿ, ಚಂದ್ರಾವತಿ ಕಡಂಬಾರ್, ಶ್ರುತಿ ಮಂಗಲ್ಪಾಡಿ, ರಂಜಿತ್ ಪೆರ್ಲ ವಹಿಸಿದರು.