ಮಂಜೇಶ್ವರ:- ಮಂಜೇಶ್ವರ ಶಾಸಕ ಕಮರುದ್ದೀನ್ ಜೈಲಿನಿಂದ ಹೊರಗೆ ಬರುವ ಮುನ್ನ ಮಂಜೇಶ್ವರದಲ್ಲಿ ಬಿಜೆಪಿ ತನ್ನ ಶಾಸಕನ ಆಯ್ಕೆಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀ ರಘುನಾಥ್ಜಿ ಹೇಳಿದರು. ಹೊಸಂಗಡಿಯ ಪ್ರೇರಣ ಸಭಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸ ವರ್ಗ ಸಮಾರೋಪ ಕಾರ್ಯಕ್ರಮವನ್ನು ಇಂದು ಸಂಜೆ ಉದ್ಘಾಟಿಸಿ ಮಾತನಾಡಿದರು.
ಕೇರಳ ಬದಲಾವಣೆಯ ಹಂತದಲ್ಲಿದೆ ಪಿನರಾಯಿಯ ವಂಚನೆ ಎಡರಂಗಕ್ಕೆ ಮುಳ್ಳಾಗಲಿದೆ, ಕಮರುದ್ದೀನ್ ವಂಚನೆ ಮುಸ್ಲಿಂ ಲೀಗ್ ಗೆ ಮುಳ್ಳಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುಧಾಮ ಗೋಸದ,ಸುರೇಶ್ ಕುಮಾರ್, ಸತೀಶ್ಚಂದ್ರ ಭಂಡಾರಿ, ವಿಜಯ್ ರೈ, ಎಕೆ ಕಯ್ಯರ್, ರೂಪವಣಿ ಭಟ್, ಉಪಸ್ಥಿತರಿದ್ದರು. ಮುರಳೀಧರ ಯಾದವ್ ಸ್ವಾಗತಿಸಿ ಪದ್ಮನಾಭ ಕಡಪರ ವಂದಿಸಿದರು, ಆದರ್ಶ್ ಬಿಎಂ ಕಾರ್ಯಕ್ರಮ ನಿರೂಪಿಸಿದರು.
ನಿನ್ನೆಯಿಂದ ಪ್ರಾರಂಭಗೊಂಡ ದ್ವಿದಿನ ಅಭ್ಯಾಸ ವರ್ಗವು ಇಂದು ಸಂಜೆ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ವಿಜೇತರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
