ಈ ಸಂದರ್ಭದಲ್ಲಿ ತಂಡದ ಕುಮಾರ್ ಮಾಲೆಮಾರ್, ಜಾನ್ವಿ ಮಾಲೆಮಾರ್, ಲೋಕೇಶ್ ಕುಲಾಲ್, ಹರ್ಷಿತ್ ಕೊಂಡಾಣ, ಉದಯ್ ಕುತ್ತಾರ್, ಪ್ರೇಮ್ ಅಸೈಗೋಳಿ, ಕಿಶೋರ್ ಬೈಕಂಪಾಡಿ, ಹರಿಣಿ ಕೆಂಜಾರ್ ಶಾಲಿನಿ ದೀಕ್ಷಿತ್, ದಿವ್ಯಾ ರಾಜ್ ಉಪಸ್ಥಿತರಿದ್ದರು.
ನೂತನ ಹೊಸ ನಾಟಕಗಳ ಮುಹೂರ್ತ
January 21, 2021
0
ನಮನ ಕಲಾವಿದೆರ್ ಕುಡ್ಲ ತಂಡದ ಕುಮಾರ್ ಮಾಲೆಮಾರ್ ನಿರ್ದೇಶನ ಹಾಗೂ ಸಾರಥ್ಯದಲ್ಲಿ ಗಾನ ಸಾಮ್ರಾಟ್ ಪ್ರಖ್ಯಾತ ಯುವ ಭಾಗವತ, ಪ್ರಸಂಗಕರ್ತ ವಿಜಿತ್ ಕುಮಾರ್ ಶೆಟ್ಟಿ ಆಕಾಶ್ ಭವನ ರಚಿಸಿದ "ಶ್ರೀ ಶಿರಡಿ ಸಾಯಿಬಾಬ" ಮತ್ತು "ತಪ್ಪಾಂಡ್ ಎನ್ನ" ಎಂಬ ಎರಡು ನೂತನ ನಾಟಕದ ಮೂಹೂರ್ತ ಕಾರ್ಯಕ್ರಮವು ಇತ್ತೀಚೆಗೆ ಪಚ್ಚನಾಡಿಯ ಶ್ರೀಮಂತ ರಾಜಗುಳಿಗ ಕ್ಷೇತ್ರ ಬಂದಲೆಯಲ್ಲಿ ಜರಗಿತು. ರಂಗಭೂಮಿ ಮತ್ತು ಚಲನಚಿತ್ರ ನಟ ಸತೀಶ್ ಬಂದಲೆ ಅವರು ಸಹಕಾರ ನೀಡಿ ಶ್ರೀಮಂತ ರಾಜಗುಳಿಗರಲ್ಲಿ ವಿಶೇಷ ಪ್ರಾರ್ಥನೆ ಮಾಡಿ ತಂಡವು ಉತ್ತುಂಗಕ್ಕೆ ಏರಲಿ, ಜನ ಮನ ಗೆದ್ದು ಹಲವಾರು ಪ್ರದರ್ಶನ ಕಾಣಲಿ ಎಂದು ಆಶೀರ್ವಾದ ನೀಡಿದರು.
Tags
