ಮಂಜೇಶ್ವರ:- ಕೇರಳದಲ್ಲಿ ಬಿಜೆಪಿಯ ರಾಜಕೀಯ ಬಲ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನತೆಯ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ ಕೆ ಪದ್ಮನಾಭನ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಇಂದು ಬೆಳಗ್ಗೆ ಹೊಸಂಗಡಿ 9ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಶ್ರಯದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ದಿನಗಳ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.
ಕೇರಳ ಪಿಣರಾಯಿಯ ಸರಕಾರ ರಾಜ್ಯದ ಜನತೆಯ ತೆರಿಗೆ ಹಣವನ್ನೇ ಕೊಳ್ಳೆ ಹೊಡೆಯುತ್ತಿದೆ. ಹಗರಣಗಳ ಜೊತೆ ಮುಖ್ಯ ಮಂತ್ರಿಯ ಪರ್ಸನಲ್ ಕಾರ್ಯದರ್ಶಿಯೇ ಜೈಲಿಗೆ ಹೋಗುವಂತಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ವಹಿಸಿದ್ದರು. ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರ್ ಶತೀಶ್ಚಂದ್ರ ಭಂಡಾರಿ ಧ್ವಜಾರೋಹಣಗೈದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ವೇದಿಕೆಯಲ್ಲಿ:- ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾ. ಶ್ರೀಕಾಂತ್, ನೇತಾರರಾದ ಸದಾನಂದ ರೈ, ನ್ಯಾ. ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಸರೋಜಾ ಆರ್. ಬಲ್ಲಾಳ್, ಎ.ಕೆ. ಕಯ್ಯಾರ್, ವಿಜಯ ರೈ ಪರಂಕಿಲ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ ಅಂಗಡಿಪದವು ಸ್ವಾಗತಿಸಿ, ಮುರಳಿಧರ್ ಯಾದವ್ ನಿರೂಪಿಸಿ, ಪದ್ಮನಾಭ ಕಡಪ್ಪರ ವಂದಿಸಿದರು. ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಮಂಜೇಶ್ವರ ಮಂಡಲದ ಜಿಲ್ಲಾ, ಬ್ಲಾಕ್, ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದು, ಇಂದು ಹಾಗೂ ನಾಳೆ ನಡೆಯುವ ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಪಾಲ್ಗೊಳ್ಳುವರು.
![]() |
ಚಿತ್ರ:- ದೀಪಕ್ ರಾಜ್ ಉಪ್ಪಳ.
ವರದಿ:- ರತನ್ ಕುಮಾರ್ ಹೊಸಂಗಡಿ.

