ಸಮಿತಿಯ ಅಧ್ಯಕ್ಷರಾದ ಶಂಕರ್ ಮತ್ತು ಉಪಾಧ್ಯಕ್ಷರಾದ ದಯಾನಂದ ಆಚಾರ್ಯ, ಮಾಜಿ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಮತ್ತು ಅಶೋಕ್ ಕುಲಾಲ್ ಕೊಪ್ಪಲಕಾಡು ಅವರ ಸಲಹೆಯಂತೆ ಕಾರ್ಯಕ್ರಮದ ಎಲ್ಲಾ ತಯಾರಿ ನಡೆಯಿತು. ಸಮಿತಿಯ ಕಾರ್ಯದರ್ಶಿ ಮನೋಜ್ ಯೆಯ್ಯಾಡಿ ಮತ್ತು ಜೊತೆ ಕಾರ್ಯದರ್ಶಿ ಮನೋಜ್ ಕುಲಾಲ್ ಕೊಡಕ್ಕಲ್, ಸಮಿತಿಯ ಕೋಶಾಧಿಕಾರಿಗಳಾದ ಶ್ರೀಮತಿ ಉಷಾ ಮೋಹನ್ ಮತ್ತು ಶ್ರೀಮತಿ ಧನಲಕ್ಷ್ಮಿ ಶ್ರೀಧರ್ ಕಾರ್ಯಕ್ರಮದ ತಯಾರಿಯಲ್ಲಿ ಭಾಗಿಯಾಗಿದ್ದರು. ಗೌರವ ಅಧ್ಯಕ್ಷರಾದ ಸುಧಾಕರ ಅಂಬೆಲ,ಮೋಹನ್ ವೈ ಆರ್, ಮೋಹನ್ ಅಮೀನ್ ಇವರು ತಮ್ಮ ಅನುಭವವನ್ನು ಸಮಿತಿಯ ಪದಾಧಿಕಾರಿಗಳಿಗೆ ನೀಡುತ್ತಾ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಪೂಜೆಗೆ ಬಿ.ಜೆ.ಪಿ ಶಾಸಕ ಡಾ. ಭರತ್ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ವರದಿ : ಮನೋಜ್ ಕುಲಾಲ್ ಕೊಡಕ್ಕಲ್
