ಕಾಸರಗೋಡು:- ಭ್ರಷ್ಟಾಚಾರ ಮುಕ್ತ ತುಷ್ಟಿಕರಣದ ವಿರುದ್ಧ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ.ಕೆ ಸುರೇಂದ್ರನ್ ನೇತೃತ್ವದಲ್ಲಿ ನಡೆಸುವ "ವಿಜಯ ಯಾತ್ರೆ" ಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನ ಬಿಜೆಪಿಯ ಹಿರಿಯ ನೇತಾರರೂ, ಬಿಜೆಪಿ ಮಾಜಿ ಅಧ್ಯಕ್ಷರಾದ ಕುಮ್ಮನಂ ರಾಜಶೇಖರನ್ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಶಾಸಕರಾದ ಸುನಿಲ್ ಕುಮಾರ್, ಬಿ.ಡಿ ಜೆ.ಎಸ್ ನೇತಾರ ತುಷಾರ್ ವೆಲ್ಲಪಳ್ಳಿ, ಬಿಜೆಪಿಯ ರಾಜ್ಯ, ಜಿಲ್ಲಾ, ಪ್ರತಿನಿಧಿಗಳಾದ ರಾಜ್ ಗೋಪಾಲ್, ವಿ. ಮುರಳಿಧರನ್, ಪಿ.ಕೆ. ಕೃಷ್ಣದಾಸ್, ಸಿ.ಕೆ ಪದ್ಮನಾಭನ್, ಶ್ರೀಮತಿ ಶೋಭಾ ಸುರೇಂದ್ರನ್, ಎಂ.ಟಿ. ರಮೇಶ್, ಜಾರ್ಜ್ ಕುರಿಯನ್, ಸುಧೀರ್, ಎಂ.ಸಂಜೀವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರಮೀಳಾ ಸಿ.ನಾಯ್ಕ್, ಸುರೇಶ್ ಶೆಟ್ಟಿ ಪೂಕಟ್ಟೆ, ಸದಾನಂದ ಮಾಸ್ತರ್, ಪಿ.ಸಿ.ಥೋಮಸ್, ರಾಮನ್ ನಾಯರ್, ಪ್ರಮೀಳಾ ದೇವಿ ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾ. ಶ್ರೀಕಾಂತ್ ಕಾಸರಗೋಡು ಸ್ವಾಗತಿಸಿ, ಮೀಡಿಯಾ ಸೆಲ್ ಕನ್ವಿನರ್ ರಂಜಿತ್ ಕಣ್ಣೂರು ನಿರೂಪಿಸಿದರು.
ಕಾರ್ಯಕ್ರಮದ ಪೂರ್ವಭಾವಿ ಕಾಸರಗೋಡು ಪೇಟೆಯಿಂದ ಕಾರ್ಯಕರ್ತರು ಮಾತೆಯರು, ಮಕ್ಕಳು ಬಿಜೆಪಿಯ ಜಯಘೋಷದೊಂದಿಗೆ ತಾಳಿಪಡ್ಪು ಮೈದಾನಕ್ಕೆ ಆಗಮಿಸಿ, ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಇಂದಿನ ಕಾರ್ಯಕ್ರಮಕ್ಕಾಗಿ ಕಾಸರಗೋಡು ಜಿಲ್ಲೆ ಹೊರತುಪಡಿಸಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜೆಲ್ಲೆಯಿಂದ ಕೂಡಾ ಅತ್ಯಂತ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು, ಕಾಸರಗೋಡು ಐತಿಹಾಸಿಕ ಕ್ಷಣವಾಗಿ ಬದಲಾಯಿತು.
ಕಾರ್ಯಕ್ರಮದ ಉದ್ಘಾಟನೆಗಾಗಿ ಆಗಮಿಸಿದ ಯೋಗಿ ಆದಿತ್ಯನಾಥ್ ಕೊನೆ ತನಕ ಮಾಸ್ಕ್ ಧರಿಸಿಯೇ ವೇದಿಕೆಯಲ್ಲಿ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.

🌹ಜೈ ಶ್ರೀರಾಮ್ 🌹
ReplyDelete🌹ಜೈ ಮಂಜುಶ್ರೀ ಟೀಮ್ 🌹
🌹ಜನರ ಸೇವೆಯಲ್ಲಿ ಜನಾರ್ಧನ ಸೇವೆ 🌹