ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಇದೇ ಬರುವ 2021 ಮೇ ತಿಂಗಳ 21 ರಿಂದ 29ರ ವರೆಗೆ ನಡೆಯಲಿರುವುದು. ಇದರ ಪೂರ್ವಭಾವಿಯಾಗಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಒಂದು ದಿನದ ತಾಂಬೂಲ ಪ್ರಶ್ನೆ ಚಿಂತನೆ ನಡೆಸಿದಾಗ ಕೆಲವು ದೋಷ ದುರಿತಗಳು ಕಂಡು ಬಂದು ಅದರ ಪರಿಹಾರ ಕಾರ್ಯಗಳು ಬ್ರಹ್ಮಶ್ರೀ ತಂತ್ರಿವರ್ಯರ ನೇತೃತ್ವದಲ್ಲಿ ದಿನಾಂಕ 08.02.2021ನೇ ಸೋಮವಾರದಂದು ಜರಗಲಿರುವುದು. ಈ ದಿನದಂದು ಮುಂಜಾನೆ ಗಣಪತಿ ಹವನ, ತ್ರಿಕಾಲ ಪೂಜೆ, ಮೃತ್ಯುಂಜಯ ಹವನ ಬಲಿವಾಡು ಕೂಟದೊಂದಿಗೆ ಸಾಮೂಹಿಕ ಪ್ರಾರ್ಥನೆ, ಸಾಯಂಕಾಲ ವನದುರ್ಗಾ ಹವನ ಇವೇ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರ ಕ್ಷೇಮ ಆರೋಗ್ಯಕ್ಕಾಗಿ ತಮ್ಮ ಮನೆಯ ಪ್ರತಿಯೊಬ್ಬ ಸದಸ್ಯರ ಬಾಬ್ತು ಒಂದು ರೂಪಾಯಿ ನಾಣ್ಯವನ್ನು ಮೃತ್ಯುಂಜಯ ಹವನದ ತೈಲಪಾತ್ರೆಗೆ ಸಮರ್ಪಿಸುವ ವಿಶೇಷ ಕಾರ್ಯವೂ ಕ್ಷೇತ್ರದಲ್ಲಿ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ತನು ಮನ ಧನಗಳ ಸಹಕಾರವನ್ನಿತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಪೂಜೆಗೆ ಬೇಕಾದ ಹೂ, ತುಳಸಿ, ಕೇಪಳ ಮೊದಲಾದ ಸುವಸ್ತುಗಳನ್ನೂ ಕೊಟ್ಟು ಸಹಕರಿಸಬೇಕಾಗಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. 9495103241,9847866153,9447660467.


