ಆಲಪ್ಪುಳ ಜಿಲ್ಲೆಯ ಚೇರ್ತಲದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಗಕುಳಂಗರ ಶಾಖೆಯ ಮುಖ್ಯ ಶಿಕ್ಷಕರಾಗಿರುವ ಆರ್. ನಂದು ಕೃಷ್ಣನ್ (23) ರವರನ್ನ ನಿನ್ನೆ ರಾತ್ರಿ SDPI ಯ ಕಾರ್ಯಕರ್ತರು ಮಾರಕಾಯುಧಗಳಿಂದ ಆಕ್ರಮಿಸಿ ಬರ್ಬರವಾಗಿ ಕೊಲೆಗೈದ ಘಟನೆಯನ್ನ ಖಂಡಿಸಿ ಮಂಜೇಶ್ವರದ ಸಂಘ ಪರಿವಾರದ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಶಂಕರ ನಾರಾಯಣ್ ಭಟ್ ಉಳುವಾಣ ಉದ್ಘಾಟಿಸಿ, ಮಾತನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ರಾಜೇಶ್ ತೂಮಿನಾಡ್, ಬಿ.ಎಂ.ಎಸ್ ಮಂಜೇಶ್ವರ ವಲಯ ಅಧ್ಯಕ್ಷರಾದ ಭಾಸ್ಕರ ಬಿ.ಎಂ, ಕೆ.ಪಿ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ಸುದೀನ್ ಕಡಂಬಾರ್, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಪವನ್ ಕುಮಾರ್ ಹೊಸಂಗಡಿ, ಮಂಜೇಶ್ವರ ಖಂಡ ಸಮಿತಿ ಅಧ್ಯಕ್ಷ ಕೌಶಿಕ್ ಮಾಡ, ಸಂಚಾಲಕ ಅನಿಲ್ ಅಂಜರೆ, ಸಹ ಸಂಚಾಲಕ ಮನೀಶ್, ಸಂಘ ಪರಿವಾರದ ನೇತಾರರಾದ ತಾರಾನಾಥ ಅಂಗಡಿಪದವು, ಈಶ್ವರ ಮಾಸ್ತರ್ ಬಡಾಜೆ, ಹರೀಶ್ಚಂದ್ರ ಮಂಜೇಶ್ವರ, ಜೀವನ್ ವರ್ಕಾಡಿ, ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಬಾಕ್ರಬೈಲ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದ ಮುಂಚಿತ ಹೊಸಂಗಡಿ ಪ್ರೇರಣಾದಿಂದ ಹೋರಟ ಪ್ರತಿಭಟನಾ ಮೆರವಣಿಗೆಗೆ ಭರತ್ ಕನಿಲ, ರದೀಶ್ ಮಂಜೇಶ್ವರ, ಯಶ್ ರಾಜ್ ಉದ್ಯಾವರ, ಚಕ್ರೇಶ್ ಉದ್ಯಾವರ, ಉದಯ ಸ್ಫೂರ್ತಿ ನಗರ ನೇತೃತ್ವ ನೀಡಿದರು. ಸಂಘ ಪರಿವಾರದ ಕಾರ್ಯಕರ್ತರಾದ ಪವನ್ ಮುಟ್ಟಮ್ ಸ್ವಾಗತಿಸಿ, ವಿನಿಶ್ ಮಾಸ್ತರ್ ನಿರೂಪಿಸಿ, ಯಶ್ ಪಾಲ್ ಉದ್ಯಾವರ ವಂದಿಸಿದರು.
(ಕೃಪೆ : ನಮ್ಮ ವರದಿ)
