ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಶಿಕ್ಷಕ ಆರ್. ನಂದು ಕೃಷ್ಣನ್ ಕೊಲೆ ಕೃತ್ಯ ಖಂಡಿಸಿ, ಸಂಘ ಪರಿವಾರದಿಂದ ಪ್ರತಿಭಟನೆ.
ಬದಿಯಡ್ಕ :- ಕೇರಳದ
ಆಲಪ್ಪುಳ ಜಿಲ್ಲೆಯ ಚೇರ್ತಲದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಗಕುಳಂಗರ ಶಾಖೆಯ ಮುಖ್ಯ ಶಿಕ್ಷಕರಾಗಿರುವ ಆರ್. ನಂದು ಕೃಷ್ಣನ್ (23) ರವರನ್ನು ನಿನ್ನೆ ರಾತ್ರಿ SDPI ಯ ಕಾರ್ಯಕರ್ತರು ಮಾರಕಾಯುಧಗಳಿಂದ ಆಕ್ರಮಿಸಿ ಬರ್ಬರವಾಗಿ ಕೊಲೆಗೈದ ಘಟನೆಯನ್ನು ಖಂಡಿಸಿ ಸಂಘ ಪರಿವಾರದ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಲಾಯಿತು.
