ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಮಾಸಿಕ ಯೋಜನೆಯಾದ ಬಡವು ಯೋಜನೆಯ 16ನೇ ಸೇವಾ ಕಾರ್ಯವು ಮೂಡಬಿದರೆಯಲ್ಲಿ ಜರುಗಿತು. ಸದಸ್ಯರಾದ ಪ್ರವೀಣ್ ಬಜಿರೆ ಇವರ ಮನವಿಯಂತೆ ಮೂಡಬಿದರೆಯ ವೃದ್ಧೆ ತಾಯಿ ಮತ್ತು ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ದೇವಕಿ ಎಂಬವರ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಪುಷ್ಪರಾಜ್ ರಾವ್, ಸದಸ್ಯರಾದ ಪ್ರವೀಣ್ ಬಜಿರೆ(ವೇಣೂರು) ಶರಣ್ ಬಜಿರೆ (ವೇಣೂರು), ಪ್ರದೀಪ್ ಕಾಶಿಪಟ್ಣ, ಸಚಿನ್ ಬಜಿರೆ (ವೇಣೂರು) ಉಪಸ್ಥಿತರಿದ್ದರು.
