ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ, ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 38 ನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ
June 16, 2021
0
ಮಂಜೇಶ್ವರ:- ಶ್ರೀಮತಿ ಮತ್ತು ಶ್ರೀ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ) (ವಿಶೇಷ ಚಾನೆಲ್ ಡಿಜಿಟಲ್ ಮೀಡಿಯದ ಯುಎಇ ಪ್ರತಿನಿಧಿ) ಮತ್ತು ಇಂದು ಜನುಮ ದಿನವನ್ನು ಆಚರಿಸುತ್ತಿರುವ. ಕಲೆ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ರಂಗದ ಚೇತನ, ಪ್ರಸ್ತುತ ಕುಳೂರು ಜಿ.ಎಲ್.ಪಿ.ಎಸ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿರುವ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಇವರ ಜನುಮ ದಿನದ ಪ್ರಯುಕ್ತ. ಇವರಿಬ್ಬರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ, ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 38 ನೇ ದಿನದ ಮಧ್ಯಾಹ್ನದ ಬಿಸಿ ಊಟವನ್ನ ಇಂದು ಅಪರಾಹ್ನ ನೀಡಲಾಯಿತು. ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶಿವೇಶ್ ರವರಿಗೆ ಸೇವಾರ್ಥಿ ಪರವಾಗಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಯೂ, ಛಾಯಾಗ್ರಾಹಕರಾದ ಶ್ರೀ ದೀಪಕ್ ರಾಜ್ ಉಪ್ಪಳ ವಿತರಿಸುವ ಮೂಲಕ ಉದ್ಗಾಟಿಸಿದರು. ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ನಿತಿನ್ ಪೈ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ಸುಧೀನ್ ವರ್ಕಾಡಿ, ಮೊದಲಾದವರು ಉಪಸ್ಥಿತರಿದ್ದರು.
Tags

