ಮಂಜೇಶ್ವರ:- ಅಬುಧಾಬಿಯ ಇಂಡಿಯಾ ಸೋಷಿಯಲ್ ಸೆಂಟರ್ನ ಮಾಜಿ ಉಪಾಧ್ಯಕ್ಷರೂ ಐಎಸ್ಸಿ ಟೋಸ್ಟ್ಮಾಸ್ಟರ್ಸ್ ಅಬುಧಾಬಿ ಇದರ ಸ್ಥಾಪಕ ಅಧ್ಯಕ್ಷ ಮಿತ್ರಂಪಾಡಿ ಶ್ರೀ ಜಯರಾಮ ರೈ. ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 31ನೆ ದಿನದ ಮಧ್ಯಾಹ್ನದ ಬಿಸಿ ಊಟವನ್ನ ನೀಡಲಾಯಿತು. ಉತ್ತಮ ರಂಗನಟ , ನಾಟಕ ರಚನೆಗಾರರಾಗಿರುವ ಮಿತ್ರಂಪಾಡಿ ಶ್ರೀ ಜಯರಾಮ್ ರೈಯವರು ಜಗತ್ತನ್ನೇ ತನ್ನ ಕಾಲಡಿಯಲ್ಲಿ ಹೊಸಕಿ ಹಾಕಲು ಹೊರಟ ಕೊರೋನಾ ಎಂಬ ಮಹಾಮಾರಿಯ ನಿಗ್ರಹಕ್ಕಾಗಿ ಲಾಕ್ ಡೌನ್ ಘೋಷಿಸಿದಾಗ ಅಬುಧಾಬಿಯಲ್ಲಿ ನೆರವು ನೀಡಿ ಸಹಕರಿಸಿದ್ದರು. ಈ ಸಂದರ್ಭದಲ್ಲಿ ವಿದೇಶದಿಂದ ತಾಯ್ನಾಡಿಗೆ ಮರಳುವವರಿಗೆ ವಿಮಾನದ ವ್ಯವಸ್ಥೆಗೆ, ಉಚಿತ ವಿಮಾನ ಟಿಕೆಟ್ ಮೊದಲಾದವುಗಳಿಗೆ ಕೈ ಜೋಡಿಸಿದರು. ಹುಟ್ಟೂರಿನ ಜನತೆಯ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿಯನ್ನು ಬೆಳೆಸಿಕೊಂಡಿರುವ ರೈಗಳು ಅಲ್ಲಿನ ಜನರ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ನಿರ್ಧರಿಸಿದರು.
ಇವರ ಸೇವಾರ್ಥವಾಗಿ ಇಂದಿನ ಸೇವೆ ನಡೆಯಿತು.
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಜೀಸ್ ರವರಿಗೆ ಸೇವಾರ್ಥಿ ಪರವಾಗಿ ಸಾಮಾಜಿಕ ಮುಂದಾಳು ಶ್ರೀ ಹರಿಜೀವನ್ ದಾಸ್ ನೀರ ಹಳ್ಳಿ ವಿತರಿಸುವ ಮೂಲಕ ಉದ್ಗಾಟಿಸಿದರು. ಈ ವೇಳೆ ಸಾಮಾಜಿಕ ಮುಂದಾಳು ಶ್ರೀ ಕಾರ್ತಿಕ್ ಶೆಟ್ಟಿ ಮಜಿಬೈಲ್ ಉಪಸ್ಥಿತರಿದ್ದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ದೀಪಕ್ ರಾಜ್ ಉಪ್ಪಳ, ಅರ್ಜುನ್ ಭಕ್ತ ಮಂಜೇಶ್ವರ, ಮೊದಲಾದವರು ಉಪಸ್ಥಿತರಿದ್ದರು.

