ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಮೂವತ್ತನೆ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ
June 08, 2021
0
ಮಂಜೇಶ್ವರ:- ದ್ವಿತೀಯ ಲಾಕ್ ಡೌನ್ ವೇಳೆಯಲ್ಲೂ ಕೊರಿಯರ್ ಸರ್ವೀಸ್ ನ ಮೂಲಕ ವಿವಿಧ ವಸ್ತುಗಳನ್ನು ಸೂಕ್ತ ಕಾಲದಲ್ಲಿ ತಲುಪಿಸುತ್ತಿರುವ ಉಪ್ಪಳದ ಏಕೈಕ ಸಂಸ್ಥೆ ಅಶ್ವಥ್ ಟ್ರಾಕ್ಓನ್ ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಮೂವತ್ತನೆ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ ಇಂದು ನಡೆಯಿತು. ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ರೆಬೀಸ್ ರವರಿಗೆ ಸೇವಾರ್ಥಿ ಪರವಾಗಿ ಶ್ರೀ ಅಶ್ವಥ್ ರವರು ವಿತರಿಸುವ ಮೂಲಕ ಉದ್ಗಾಟಿಸಿದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ದೀಪಕ್ ರಾಜ್ ಉಪ್ಪಳ, ಅರ್ಜುನ್ ಭಕ್ತ ಮಂಜೇಶ್ವರ, ಮೊದಲಾದವರು ಉಪಸ್ಥಿತರಿದ್ದರು.
Tags
