ಮಂಜೇಶ್ವರ:- ಸಾಗರದಾಚೆಗಿನ ಕುವೈಟ್ ದೇಶದಲ್ಲಿ ಭಾರತ ದೇಶದ ತುಳುನಾಡಿನ ಸಂಸ್ಕಾರವನ್ನ ಸಂಘಟನಾತ್ಮಕ ರೂಪದಲ್ಲಿ ಉಳಿಸಿಕೊಂಡು ಬರುತ್ತಾ ತುಳುನಾಡಿಗೆ ವಿಶೇಷ ಸೇವೆಯನ್ನ ನೀಡುತ್ತಿರುವ ತುಳು ಕೂಟ ಕುವೈಟ್ ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 34 ನೇ ದಿನದ ಮಧ್ಯಾಹ್ನದ ಬಿಸಿ ಊಟವನ್ನ ನೀಡಲಾಯಿತು. ಕಳೆದ 21 ವರ್ಷಗಳಿಂದ ಕುವೈಟ್ ನಲ್ಲಿ ತುಳುನಾಡ ಸಂಸ್ಕೃತಿ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಪ್ರಗತಿಗಾಗಿ ಅಹರ್ನಿಸಿ ಕಾರ್ಯನ್ಮೋಖವಾಗಿರುವ "ತುಳುಕೂಟ ಕುವೈಟ್" ಸಂಸ್ಥೆಯು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ವಿಶೇಷ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಘದ ನೇತೃತ್ವದಲ್ಲಿ ತುಳುಪರ್ಬ, ಕ್ಷೇಮಾಭಿವೃದ್ಧಿ, ಶೈಕ್ಷಣಿಕ, ಸಂಗೀತ, ಸಾಂಸ್ಕೃತಿಕ ಕೈಂಕರ್ಯಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ. ತುಳುನಾಡಿಗೆ ಸರ್ವತೋಮುಖ ಸ್ಪಂದನೆ ನೀಡುವ ತುಳುಕೂಟ ಕುವೈಟ್ ಇಂದು ತುಳುನಾಡಿಗಾಗಿ ಸಂಸ್ಕೃತಿ ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇವರ ಸೇವಾರ್ಥವಾಗಿ ಇಂದಿನ ಸೇವೆ ನಡೆಯಿತು.
ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಜೀಸ್ ರವರಿಗೆ ಸೇವಾರ್ಥಿ ಪರವಾಗಿ ಸ್ಕಂದ ಹೆಲ್ಪ್ ಡೆಸ್ಕ್ ನ ಕೋಶಾಧಿಕಾರಿ ಶ್ರೀ ಸುಧೀನ್ ಕುಮಾರ್ ವರ್ಕಾಡಿ ವಿತರಿಸುವ ಮೂಲಕ ಉದ್ಗಾಟಿಸಿದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ದೀಪಕ್ ರಾಜ್ ಉಪ್ಪಳ, ಅರ್ಜುನ್ ಭಕ್ತ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.


